ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಗೊಬ್ಬರಗಾಲನಿಂದ ಕಣ್ಣೀರಿಟ್ಟ ಕಾವ್ಯಶ್ರೀ: ಖಡಕ್ ವಾರ್ನಿಂಗ್ ಕೊಟ್ಟ ‘ಮಂಗಳಗೌರಿ’
ಕಾವ್ಯಶ್ರೀ ಅವರನ್ನು ತಮಾಷೆ ಮಾಡಲು ಹೋಗಿ ಅವರ ಕಣ್ಣೀರಿಗೆ ಗೊಬ್ಬರಗಾಲ ಕಾರಣವಾಗಿದ್ದಾರೆ. ಮನೆಮಂದಿಯನ್ನು ರಂಜಿಸಲು ನಾಟಕ ಆಟುವಾಗ ಮುಸರೆ ತಿಕ್ಕುವವಳು, ಕಸ ಗುಡಿಸುವವಳನ್ನು ಯಾಕೆ ರಾಣಿ ಮಾಡಿದ್ದೀರಿ ಎಂದಿದ್ದಾರೆ. ಇದರಿಂದ ಬೇಸರಗೊಂಡ ಕಾವ್ಯಶ್ರೀ ಕಣ್ಣೀರು ಹಾಕಿದ್ದಾರೆ. ಈ ಊಟ ಜಗಳದ ಸಂದರ್ಭದಲ್ಲೂ ಮುಂದುವರೆದಿದ್ದು ಕಾವ್ಯಶ್ರೀಗೆ ಬಾ ಅನ್ನ ಹಾಕು ಎಂದಿದ್ದಾರೆ. ಇದರಿಂದ ಕಾವ್ಯಶ್ರೀ ಮತ್ತಷ್ಟು ಬೇಸರಗೊಂಡಿದ್ದಾರೆ.
ಇದೇ ವೇಳೆ ಬಿಗ್ ಬಾಸ್ ಮನೆ ಮಂದಿಯ ದುಷ್ಟ ಗುಣ ಬಗ್ಗೆ ಟ್ಯಾಗ್ ಲೈನ್ ವಿವರಣೆ ಕೊಡುವ ಟಾಸ್ಕ್ ನೀಡಿದ್ದರು. ಈ ವೇಳೆ ಕಾವ್ಯಶ್ರೀ ಕೋಪ ಹಾಗೂ ಅಹಂಕಾರದ ಬೋರ್ಡ್ ಅನ್ನು ಗೊಬ್ಬರಗಾಲಗೆ ಕೊಟ್ಟಿದ್ದಾರೆ. ಅಲ್ಲದೆ ಒಬ್ಬ ವ್ಯಕ್ತಿಗೆ ಮರ್ಯಾದೆ ಕೊಟ್ಟು ಮಾತನಾಡುವ ಗುಣವಿಲ್ಲ. ಕೇಳುವ ಪರಿಜ್ಞಾನವೂ ಇಲ್ಲ. ಬಿಗ್ ಬಾಸ್ ಮನೆಗೆ ನಾನು ಲವ್ ಮಾಡೋಕೆ ಬಂದಿಲ್ಲ. ಬದುಕು ಕಟ್ಟಿಕೊಳ್ಳಲು ಬಂದಿದ್ದೇನೆ. ನನಗೆ ಬದಕಲು ಬಿಡಿ ಎಂದು ಎಚ್ಚರಿಕೆ ನೀಡಿದ್ದಾರೆ.
