• January 2, 2026

ರೂಪೇಶ್, ಸಾನ್ಯಾ ಮಧ್ಯೆ ಕಾವ್ಯಶ್ರೀಯನ್ನು ಎಳೆದು ತಂದ ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಓಟಿಟಿಯಲ್ಲಿ ಗಮನ ಸೆಳೆದ ಜೋಡಿ ರೂಪೇಶ್ ಶೆಟ್ಟಿ ಸಾನ್ಯಾ ಐಯ್ಯರ್. ಹೋದಲ್ಲಿ ಬಂದಲ್ಲೆಲ್ಲಾ ಕೈ ಕೈ ಹಿಡಿದು ಓಡ್ತಾಡ್ತಿದ್ದ ಜೋಡಿಗಳು ಬಿಗ್ ಬಾಸ್ ಮನೆಗೆ ಕಾಲಿಡ್ತಿದ್ದಂತೆ ಕೊಂಚ ದೂರ ದೂರವಾಗಿದ್ದರು. ಕಾವ್ಯಶ್ರೀ ಮಧ್ಯೆ ಬಂದಿದ್ರಿಂದ ಇಬ್ಬರ ಮಧ್ಯೆ ಮಾತುಕತೆ ಕಡಿಮೆಯೇ ಆಗಿತ್ತು. ಆದರೆ ಇದಕ್ಕೆಲ್ಲಾ ನೇರಾ ಕಾರಣ ಆರ್ಯವರ್ಧನ್ ಗುರೂಜಿ. ಹೌದು. ಅದೆಷ್ಟೋ ಭಾರಿ ರೂಪೇಶ್ ಹಾಗೂ ಕಾವ್ಯಶ್ರೀ ಮಾತನಾಡುವುದನ್ನು ದೂರದಿಂದಲೇ ನೋಡಿ ನೊಂದುಕೊಂಡಿದ್ದರು ನಟಿ ಸಾನ್ಯಾ ಐಯ್ಯರು. ಅಲ್ಲದೆ ಈ ಬಗ್ಗೆ ರೂಪೇಶ್ ಶೆಟ್ಟಿ ಬಳಿ ಹೇಳಿ ಕಣ್ಣೀರು ಹಾಕಿದ್ದರು. ಆದರೆ ಇದಕ್ಕೆಲ್ಲಾ ಕಾರಣ ಗುರೂಜಿ ಎಂದು ತಿಳಿದು ಸಾನ್ಯಾ ಮನಸ್ಸು ತಿಳಿಯಾಗಿದ್ದು ಮನೆ ಮಂದಿಯೆಲ್ಲಾ ಈ ಜೋಡಿಯ ಜೊತೆ ಸೇರಿಕೊಂಡು ನಕ್ಕಿದ್ದಾರೆ. ಓಟಿಟಿ ಬಿಗ್ ಬಾಸ್ ನಲ್ಲಿ ಎಲ್ಲರ ಗಮನ ಸೆಳೆದಿದ್ದ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಸೀಸನ್ 9ರಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ನಟ ದರ್ಶ್ ಚಂದ್ರಪ್ಪ ಮತ್ತು ಕಾವ್ಯಶ್ರೀಗೆ ಗುರೂಜಿ ಸಲಹೆಯೊಂದನ್ನು ನೀಡಿ ಮತ್ತೆ ಸುದ್ದಿಯಾಗಿದ್ದಾರೆ. ದರ್ಶ್ ನೀವು ನೋಡಲು ಚೆನ್ನಾಗಿದ್ದೀರಾ. ನೀವು ಹುಡುಗಿರ ಹಿಂದೆ ಹೋಗಬೇಡಿ. ಹುಡುಗಿಯರೇ ನಿಮ್ಮ ಹಿಂದೆ ಬರುತ್ತಾರೆ. ಮನೆಯಲ್ಲಿ ಹೈಲೆಟ್ ಆಗಲು ಯಾವುದಾದರೂ ಹುಡುಗಿಯನ್ನ ಕ್ಯಾಚ್ ಹಾಕಿಕೊಳ್ಳಿ. ಹೀಗೆ ಮಾಡಿದ್ದರೆ ನೀವು ಸಾಕಷ್ಟು ದಿನ, ಈ ಮನೆಯಲ್ಲಿ ಉಳಿದುಕೊಳ್ಳಬಹುದು ಎಂದಿದ್ದಾರೆ. ಜೊತೆಗೆ ಕಾವ್ಯಶ್ರೀಗೆ ರೂಪೇಶ್ ಹಾಗೂ ಸಾನ್ಯ ಜೊತೆಯಲ್ಲಿ ಇರಲು ಬಿಡಬೇಡ. ರೂಪೇಶ್ ಜೊತೆ ಇದ್ದು ಸಾನ್ಯಗೆ ಕೋಪ ಬರಿಸು, ಅವರಿಬ್ಬರು ಹತ್ತಿರವಾಗದಂತೆ ನೋಡಿಕೋ ಎಂದಿದ್ದಾರೆ ಈ ಬಗ್ಗೆ ಸ್ವತಃ ಕಾವ್ಯ ವೀಕೆಂಡ್‌ನಲ್ಲಿ ಕಿಚ್ಚನ ಮುಂದೆ ರಿವೀಲ್ ಮಾಡಿದ್ದಾರೆ. ಗುರೂಜಿ ಕೊಟ್ಟ ಟಿಪ್ಸ್ ಕೇಳಿ, ಸಾನ್ಯ ಜೋರಾಗಿ ಚಪ್ಪಾಳೆ ಹೊಡೆದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now