• March 15, 2026

ಓಟಿಟಿಯಿಂದ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದ ಸ್ಪರ್ಧಿಗಳಿವರು

ಇದೇ ಮೊದಲ ಭಾರಿಗೆ ಕನ್ನಡ ಓಟಿಟಿಯಲ್ಲಿ ಪ್ರಸಾರವಾದ  ಬಿಗ್ ಬಾಸ್ ರಿಯಾಲಿಟಿ ಶೋ ಆಟಕ್ಕೆ ತೆರೆ ಬಿದ್ದಿದೆ. 42 ದಿನಗಳ ದೊಡ್ಮನೆ ವಾಸ್ತವ್ಯದಲ್ಲಿ ಬಿಗ್ ಬಾಸ್ ಓಟಿಟಿ ಟಾಪರ್ ಆಗಿ ನಟ ರೂಪೇಶ್ ಶೆಟ್ಟಿ ಆಯ್ಕೆಯಾಗಿದ್ದು ಟಿವಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ.ಇವರ ಜೊತೆ ಇನ್ನೂ ಮೂವರು ದೊಡ್ಮನೆಗೆ ಕಾಲಿಟ್ಟಿದ್ದಾರೆ. ಶುಕ್ರವಾರ(ಸೆ.16)ಸಂಜೆ ಬಿಗ್ ಬಾಸ್ ಓಟಿಟಿ ಫಿನಾಲೆಗೆ ತೆರೆ ಬಿದ್ದಿದೆ. ತುಳು ನಾಡ ಪ್ರತಿಭೆ ನಟ ರೂಪೇಶ್ ಶೆಟ್ಟಿ ಬಿಗ್ ಬಾಸ್ ಓಟಿಟಿಯ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ಟಿವಿ  ಬಿಗ್ ಬಾಸ್ ಸೀಸನ್ 9ಗೆ ಆಯ್ಕೆಯಾಗಿದ್ದಾರೆ. ಇವರ ಜೊತೆಗೆ ಸಾನ್ಯಾ ಐಯರ್, ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಸೀಸನ್ 9ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಸೀಸನ್ 9ಕ್ಕೆ ಹೋಗಲು ಆಯ್ಕೆ ಯಾಗಿದ್ದಾರೆ ಎಂದು ಸುದೀಪ್ ಹೇಳುತ್ತಲೇ ಗುರೂಜಿ ಸಖತ್ ಎಮೋಷನಲ್ ಆದರು. ಈ ವೇಳೆ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಜೊತೆ ಗುರೂಜಿ ಮಗಳು ನಿಂತುಕೊಂಡಿದ್ದರು. ಇದನ್ನು ನೋಡಿದ ಗುರೂಜಿ, ‘ನನ್ನ ಮಾತುಗಳನ್ನು ಅರ್ಥ ಮಾಡಿಕೊಂಡ ಸುದೀಪ್​ ಸರ್​ಗೆ ನಾನು ಧನ್ಯವಾದ ಹೇಳುತ್ತೇನೆ. ವೋಟ್​ ಹಾಕಿದವರಿಗೆ ಜೀವನ ಪೂರ್ತಿ ಚಿರಋಣಿ ಆಗಿರುತ್ತೇನೆ’ ಎಂದು ಎಮೋಷನಲ್​ ಆದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now