ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸದ್ಯದಲ್ಲೇ ಶುರುವಾಗಲಿದೆ ಬಿಗ್ ಬಾಸ್ ಒಟಿಟಿ ಶೋ: ಸುದೀಪ್ ಎಷ್ಟು ದಿನ ಇರುತ್ತಾರೆ ಗೊತ್ತಾ?
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ವೀಕೆಂಡ್ ನಲ್ಲಿ ನಿರೂಪಣೆ ಮಾಡುತ್ತಿದ್ದ ಸುದೀಪ್ ಓಟಿಟಿಯಲ್ಲೂ ಅದನ್ನೇ ಮುಂದುವರೆಸಿದ್ದಾರೆ. 42 ದಿನಗಳ ಕಾಲ ನಡೆಯುವ ಶೋನಲ್ಲಿ ಸುದೀಪ್ ಶನಿವಾರ ಹಾಗೂ ಭಾನುವಾರ ಕಾಣಿಸಿಕೊಳ್ಳಲಿದ್ದಾರೆ.
ಈ ಬಾರಿ ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ. ನೇರವಾಗಿ ಒಟಿಟಿಯಲ್ಲಿ ಮಾತ್ರ ಪ್ರಸಾರ ಕಾಣಲಿದೆ. ದಿನದ 24 ಗಂಟೆ ಶೋ ಪ್ರಸಾರ ಆಗುತ್ತಿರುತ್ತದೆ. ವಿಶೇಷ ಎಂದರೆ ಬಿಗ್ ಬಾಸ್ ಮನೆಯಲ್ಲಿ ನಡೆಯುವ ಘಟನಾವಳಿಗೂ, ಒಟಿಟಿ ಪ್ರಸಾರಕ್ಕೂ ಎರಡು ನಿಮಿಷಗಳ ಅಂತರ ಮಾತ್ರ ಇರಲಿದೆ. ತಾಂತ್ರಿಕವಾಗಿ ಇದೊಂದು ಚಾಲೆಂಜ್ ಎಂಬುದು ಪರಮೇಶ್ವರ್ ಗುಂಡ್ಕಲ್ ಅಭಿಪ್ರಾಯ.
‘ಬಿಗ್ ಬಾಸ್ ಒಟಿಟಿಯಲ್ಲಿ ವಿನ್ನರ್ ಇರಲ್ಲ. ವಿನ್ನರ್ಸ್ ಇರುತ್ತಾರೆ. ಬಿಗ್ ಬಾಸ್ ಓಟಿಟಿ ಮುಗಿದ ಬಳಿಕ ದೊಡ್ಡ ಬಿಗ್ ಬಾಸ್ ಆರಂಭ ಆಗಲಿದೆ. ಇದು ಆಡಿಷನ್ ಸ್ಟೇಜ್ ಎಂದು ನಾನು ಹೇಳಲ್ಲ. 42ನೇ ದಿನಕ್ಕೆ ಈ ಎಲ್ಲಾ ವಿಚಾರಕ್ಕೆ ಉತ್ತರ ಸಿಗಲಿದೆ ಎಂದು ಪರಮೇಶ್ವರ್ ಗುಂಡ್ಕಲ್ ಹೇಳಿದ್ದಾರೆ.
