ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ತೆರೆಗೆ ಬರಲು ಸಿದ್ದವಾದ ಬಿಗ್ ಬಾಸ್ ಖ್ಯಾತಿಯ ಅರ್ಜುನ್ ರಮೇಶ್ ನಟನೆಯ ‘ಕೌಟಿಲ್ಯ’
ನಾನು ಈ ಹಿಂದೆ “ಶನಿ” ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾಗಿನಿಂದಲೂ ನೀವು ನೀಡುತ್ತಿರುವ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆದಿದೆ. ನನ್ನದು ಈ ಚಿತ್ರದಲ್ಲಿ ಆರ್ಕಿಟೆಕ್ಟ್ ಇಂಜಿನಿಯರ್ ಪಾತ್ರ. ಒಬ್ಬ ಇಂಜಿನಿಯರ್ ಚಾಣಕ್ಯನ ತಂತ್ರಗಳನ್ನು ಯಾವ ರೀತಿ ಬಳಸಿಕೊಳ್ಳುತ್ತಾನೆ ಎನ್ನುವುದನ್ನು ಈ ಚಿತ್ರದಲ್ಲಿ ನೋಡಬಹುದು ಎಂದು ನಾಯಕ ಅರ್ಜುನ್ ರಮೇಶ್ ತಮ್ಮ ಪಾತ್ರ ಹಾಗೂ ಚಿತ್ರದ ಕುರಿತು ಮಾತನಾಡಿದರು.
ನಾನು ಈ ಚಿತ್ರದಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನನ್ನು ಧಾರಾವಾಹಿಗಳಲ್ಲಿ ಮುಗ್ಧ ಹುಡುಗಿಯ ಪಾತ್ರದಲ್ಲಿ ನೋಡಿದ್ದೀರಿ. ಇದರಲ್ಲಿ ಒಬ್ಬರೂ ಬಯ್ದರೆ ವಾಪಸ್ ಬಯ್ಯುವ ಹುಡುಗಿ ನಾನು. ವಿಭಿನ್ನ ಪಾತ್ರ ನೀಡಿರುವ ನಿರ್ದೇಶಕರಿಗೆ ಧನ್ಯವಾದ ಎನ್ನುತ್ತಾರೆ ನಾಯಕಿ ಪ್ರಿಯಾಂಕ ಚಿಂಚೋಳಿ.
ಚಿತ್ರ ಉತ್ತಮವಾಗಿ ಮೂಡಿಬರಲು ಸಹಕಾರ ನೀಡಿದ ಚಿತ್ರತಂಡಕ್ಕೆ ನಿರ್ಮಾಪಕ ವಿಜೇಂದ್ರ.ಬಿ.ಎ ವಿಶೇಷ ಧನ್ಯವಾದಗಳನ್ನು ತಿಳಿಸಿದರು.
