• March 15, 2026

ಎಷ್ಟು ಜನರ ಜೊತೆ ಫ್ಲರ್ಟ್ ಮಾಡಿದ್ದೇನು ಎಂದು ನನಗೆ ಗೊತ್ತಿಲ್ಲ: ಅರ್ಜುನ್ ರಮೇಶ್

ಕನ್ನಡದ ಬಿಗ್ ಬಾಸ್ ಓಟಿಟಿ ಆರಂಭವಾಗಿದ್ದು ದೊಡ್ಮನೆ ಒಳಗೆ ಸ್ಪರ್ಧಿಗಳು ತಮ್ಮ ರಿಯಲ್ ಲೈಫ್ ಕುರಿತು ಹೇಳಿಕೊಳ್ಳುತ್ತಿದ್ದಾರೆ. ಈಗಾಗ್ಲೆ ಸಾಕಷ್ಟು ಮಂದಿ ತಮ್ಮ ಜೀವನದ ಕಹಿ ಹಾಗೂ ಸಿಹಿ ಘಟನೆಯನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಇದೀಗ ಬಿಗ್ ಬಾಸ್ ಸ್ಪರ್ಧಿ ಅರ್ಜುನ್ ರಮೇಶ್ ತಮ್ಮ ಜೀವನದ ಅಚ್ಚರಿಯ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ರಾಜಕೀಯ ಹಾಗೂ ನಟನೆ ಎರಡರಲ್ಲೂ ಆಕ್ಟೀವ್ ಆಗಿರುವ ಅರ್ಜುನ್ ರಮೇಶ್ ಅವರಿಗೆ ಇಬ್ಬರು ಹೆಂಡತಿಯರು. ಇದನ್ನು ಅರ್ಜುನ್ ಮೊದಲೇ ಹೇಳಿಕೊಂಡಿದ್ದರು. ಅಚ್ಚರಿ ಎಂದರೆ ಅರ್ಜುನ್ ರಮೇಶ್ ಫ್ಲರ್ಟ್ ವಿಚಾರದಲ್ಲಿ ನಟ ಸಂಜಯ್ ದತ್ ರನ್ನೇ ಮೀರಿಸುತ್ತೇನೆ ಎಂದಿದ್ದಾರೆ. ಇದುವರೆಗೂ ನಾನು ಎಷ್ಟು ಜನರ ಜತೆ ಫ್ಲರ್ಟ್ ಮಾಡಿದ್ದೇನೆ ಎಂಬುದು ನನಗೇ ಗೊತ್ತಿಲ್ಲ. ಆ ಲೆಕ್ಕವನ್ನು ಇಲ್ಲಿ ಕೊಡೋಕೆ ಹೋಗಲ್ಲ. ಇದರ ಲೆಕ್ಕ ನೀಡೋಕೆ ಹೋದರೆ ಸಂಜಯ್ ದತ್​ ಅವರನ್ನೇ ಹಿಂದಿಕ್ಕುತ್ತೇನೆ’ ಎಂದಿದ್ದಾರೆ. ಮಿಲನ್ ನನ್ನ ಮೊದಲ ಹೆಂಡತಿ. ಮಿಲನ್ ರನ್ನ ಮದುವೆ ಆಗಿದ್ದಾಗಲೇ ರವಿಕಾ ಜತೆ ಪ್ರೀತಿಯಲ್ಲಿದ್ದೆ. ರವಿಕಾಳನ್ನು ಸುಮಾರು ಐದು ವರ್ಷಗಳ ಕಾಲ ಹೊರ ಜಗತ್ತಿನಿಂದ ಬಚ್ಚಿಟ್ಟಿದೆ. ರವಿಕಾಳನ್ನು ಭೇಟಿ ಮಾಡುವ ವಿಚಾರ ಮಿಲನ್​ಗೆ ಗೊತ್ತಾದರೆ ಎಂಬ ಭಯ ಸದಾ ಕಾಡುತ್ತಿತ್ತು. ‘ರವಿಕಾಗೆ ಮಗು ಜನಿಸಿದ ಮೂರು ದಿನಕ್ಕೆ ಈ ವಿಚಾರವನ್ನು ನಾನು ಮಿಲನ್​ಗೆ ಹೇಳಿದೆ. ನನಗೆ ಮಗು ನೋಡಬೇಕು ಎಂದಳು. ಇದು ಅವಳ ಮೊದಲ ರಿಯಾಕ್ಷನ್ ಆಗಿತ್ತು​. ಮಗುವನ್ನು ಮಿಲನ್ ಮುದ್ದಾಡಿದಳು’ ಎಂದಿದ್ದಾರೆ ಅರ್ಜುನ್​ ರಮೇಶ್ ಬಿಗ್ ಬಾಸ್ ಮನೆಯಲ್ಲಿ ತಮ್ಮ ಪ್ರೀತಿಯ ವಿಷಯವನ್ನು ಮಾತನಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now