ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನೀನು ಹಾಲು ಇದ್ದಂತೆ, ಒಮ್ಮೆಲೆ ಉಕ್ಕುತ್ತೀಯ: ಸೋನು ಗೌಡ ವ್ಯಕ್ತಿತ್ವ ಬಣ್ಣಿಸಿದ ಆರ್ಯವರ್ಧನ್
ಬಿಗ್ ಬಾಸ್ ಗೆ ಎದುರುತ್ತರ ನೀಡಿದ ಕಾರಣಕ್ಕೆ ಸುದೀಪ್ ಸೋನು ಗೌಡ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕಳಪೆ ಪ್ರದರ್ಶನ ನೀಡಿ ಜೈಲು ವಾಸ ಅನುಭವಿಸಿ ಬಂದಿರುವ ಸೋನು ಗೌಡ ಅವರ ವ್ಯಕ್ತಿತ್ವ ಹೇಗಿದೆ ಅನ್ನೋದನ್ನು ಆರ್ಯವರ್ಧನ್ ಗುರೂಜಿ ತಮ್ಮದೇ ರೀತಿಯಲ್ಲಿ ಹೇಳಿದ್ದಾರೆ.
ಕಳಪೆ ಪ್ರದರ್ಶನ ನೀಡಿದ ಕಾರಣಕ್ಕೆ ಸೋನು ಗೌಡ ಅವರನ್ನು ಬಿಗ್ ಬಾಸ್ ಮನೆಗೆ ಜೈಲಿಗೆ ಕಳುಹಿಸಲಾಯಿತು. ತಮಗೆ ಕಳಪೆ ಪಟ್ಟ ನೀಡಿದರು ಎಂಬ ಕಾರಣಕ್ಕೆ ಮನೆಯ ಇತರ ಸ್ಪರ್ಧಿಗಳ ವಿರುದ್ಧ ಗರಂ ಆಗಿದ್ದರು. ಹೀಗಾಗಿ ಸಾಕಷ್ಟು ಮಂದಿ ಸೋನು ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದರು. ಈ ವೇಳೆ ಆರ್ಯವರ್ಧನ್ ಗುರೂಜಿ ಕೂಡ ಸೋನು ಅವರ ಕೋಪವನ್ನು ತಣ್ಣಗಾಗಿಸಲು ಪ್ರಯತ್ನಿಸಿದ್ದರು.
‘ನಾನು ಗಮನಿಸಿದಂತೆ ನೀನು ಒಂಥರ ಹಾಲು ಇದ್ದಂಗೆ. ಸಿಟ್ಟಾದರೆ ಒಂದೇ ಸಲ ಉಕ್ಕುತ್ತೀಯ. ಪಾತ್ರೆ ಸರಿ ಇಲ್ಲ ಎಂದರೆ ಒಂದೇ ಸಲ ಒಡೆದು ಹೋಗ್ತೀಯ’ ಎಂದು ಆರ್ಯವರ್ಧನ್ ಗುರೂಜಿ ಹೇಳಿದರು. ಆ ಮಾತು ಕೇಳಿ ಸೋನುಗೆ ನಗು ಬಂತು. ‘ಆದರೆ ನಾನು ಮತ್ತೆ ಹಾಲಾಗಲು ಟ್ರೈ ಮಾಡಲ್ಲ. ಮಾತಾಡ್ತೀನಿ, ನಾರ್ಮಲ್ ಆಗಿ ಇರ್ತೀನಿ. ಆದರೆ ಮೊದಲು ಇದಷ್ಟು ಪ್ರೀತಿ, ಮೊದಲು ಇದ್ದಷ್ಟು ಕಾಳಜಿ ತೋರಿಸಲ್ಲ. ಅಷ್ಟು ಪ್ರೀತಿ ಇದ್ದಿದ್ದಕ್ಕಾಗಿಯೇ ನನಗೆ ಈ ಜಾಗ’ ಎಂದು ಸೋನು ಗೌಡ ಬೇಸರ ತೋಡಿಕೊಂಡರು.
ಸೋನು ಗೌಡ ಜೈಲಿಗೆ ಹೋಗಿದ್ದರಿಂದ ಬೇಸರಕೊಂಡಿರುವ ರಾಕೇಶ್ ಅಡಿಗ ಏನು ತಿನ್ನದೇ ಬರೀ ಗಂಜಿ ತಿಂದುಕೊಂಡೆ ದಿನ ಕಳೆದಿದ್ದರೆ. ಸೋನು ಗೌಡ ಅವರನ್ನು ಜೈಲಿಗೆ ಕಳುಹಿಸಿದಕ್ಕೆ ಶಿಕ್ಷೆ ಇದು ಎಂದು ರಾಕೇಶ್ ಸಾನ್ಯಾ ಬಳಿ ಹೇಳಿಕೊಂಡಿದ್ದಾರೆ.
