ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕೆ ವಾರ್: ಮನೆಯಿಂದ ಹೊರ ಹೋಗಲು ಮುಂದಾದ ರೂಪೇಶ್ ರಾಜಣ್ಣ
ಟಾಸ್ಕ್ವೊಂದರಲ್ಲಿ ಮೊದಲು ಬಝರ್ ಒತ್ತಿದ್ದು ನಾನು ಎಂದು ರೂಪೇಶ್ ರಾಜಣ್ಣ ಪಟ್ಟು ಹಿಡಿದಿದ್ದಾರೆ. ಬಿಗ್ ಬಾಸ್ ಬಳಿ ಅನುಪಮಾ ಅಪೀಲ್ ಮಾಡಲಿಲ್ಲ ಎಂಬ ಕಾರಣಕ್ಕೆ ರೂಪೇಶ್ ರಾಜಣ್ಣ ಗರಂ ಆಗಿದ್ದಾರೆ. ಇದೇ ಕಾರಣಕ್ಕೆ ಸೂಟ್ ಕೇಸ್ ಹಿಡಿದು ಮನೆಯಿಂದ ಹೊರಗೆ ಹೋಗಲು ರೂಪೇಶ್ ರಾಜಣ್ಣ ಮುಂದಾಗಿದ್ದಾರೆ. ಕೊನೆಗೆ ನನ್ನ ತಪ್ಪಿದ್ದರೆ ನಾನೇ ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳ್ತೀನಿ ಎಂದು ರಾಜಣ್ಣ ಅವರಿಗೆ ಅನುಪಮಾ ಕೇಳಿಕೊಂಡಿದ್ದಾರೆ.
ಮುಂದಿನ ವಾರದ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಲು ನಡೆದ ಜಟಾಪಟಿಯಲ್ಲಿ ರೂಪೇಶ್ ರಾಜಣ್ಣ ಹಾಗೂ ಪ್ರಶಾಂತ್ ಸಂಬರ್ಗಿ ಒಂದೇ ಸಮಯದಲ್ಲಿ ಬಝರ್ ಒತ್ತಿದರು. ಸಂಬರ್ಗಿ ಮೊದಲು ಬಝರ್ ಒತ್ತಿದರು ಅಂತ ಅನುಪಮಾ ಹೇಳಿದ್ದರು. ಆಗ ನಾನು ಮೊದಲು ಒತ್ತಿದ್ದು ಅನ್ನೋದು ರೂಪೇಶ್ ರಾಜಣ್ಣ ಅವರ ವಾದವಾಗಿತ್ತು. 100% ನಾನು ಮುಟ್ಟಿದ್ಮೇಲೆ ಪ್ರಶಾಂತ್ ಸಂಬರ್ಗಿ ಮುಟ್ಟಿದ್ದು. ದೇವರಿದ್ದಾನೆ ಎಂದು ರಾಜಣ್ಣ ಹೇಳಿದರು. ಇದರಿಂದ ಕೋಪಗೊಂಡ ಅನುಪಮಾ, ಆ ಲೈನ್ ಹೇಳಬೇಡಿ. ನಾನಿಲ್ಲಿ ಯಾರಿಗೂ ಫೇವರ್ ಮಾಡ್ತಿಲ್ಲ ಎಂದು ಗರಂ ಆದರು.
ನಾನು ಬಿಗ್ ಬಾಸ್ ಮನೆಯ ರಸ್ತೆ ಮೇಲೆ ಮಲಗುತ್ತೇನೆ. ನ್ಯಾಯಕ್ಕಾಗಿ ಹೋರಾಡುತ್ತೇನೆ. ಗೊಂದಲ ಇದ್ದರೆ ಕೇಳಿಕೊಳ್ಳಿ ಅಂತ ಮೊದಲೇ ಹೇಳಿದ್ದೆ. ಆದರೆ, ಕೇಳದೆ ನೇರವಾಗಿ ಘೋಷಣೆ ಮಾಡಿದರು ಎಂದು ಕ್ಯಾಮರಾ ಮುಂದೆ ರಾಜಣ್ಣ ಹೋರಾಟಕ್ಕಿಳಿದರು. ಆಟ ಆಡುವುದಿಲ್ಲ ಎಂದು ರೂಪೇಶ್ ರಾಜಣ್ಣ ಪಟ್ಟು ಹಿಡಿದರು. ಈ ವೇಳೆ, ನಾನು ತಪ್ಪು ಮಾಡಿದ್ರೆ ಬಿಗ್ ಬಾಸ್ ಶಿಕ್ಷೆ ಕೊಡಲಿ. ಬೇಕಿದ್ದರೆ, ನಾನೇ ಹೊರಗೆ ಹೋಗುತ್ತೇನೆ ಎಂದರು ಅನುಪಮಾ. ಆದರೂ ರಾಜಣ್ಣ ಅವರ ಮನವೊಲಿಸಲು ಅನುಪಮಾ ಕಡೆಗೂ ಸೋತು ನನ್ನ ತಪ್ಪಿದ್ದರೆ ನಾನೇ ನಿಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳ್ತೀನಿ ಎಂದು ರಾಜಣ್ಣ ಅವರಿಗೆ ಅನುಪಮಾ ಕೇಳಿಕೊಂಡರು.
