• January 2, 2026

ಬಿಗ್ ಬಾಸ್ ಸೀಸನ್ 9ರಲ್ಲಿ ಇರಲಿದ್ದಾರೆ ಈ ಸ್ಪರ್ಧಿಗಳು

ಈಗಾಗ್ಲೆ ಬಿಗ್ ಬಾಸ್ ಓಟಿಟಿ ಮುಗಿದ್ದಿದ್ದು ಬಿಗ್ ಬಾಸ್ ಟಿವಿ ಶೋಗೆ ಕೌಂಟ್ ಡೌನ್ ಶುರುವಾಗಿದೆ. ಇದೇ ಸೆಪ್ಟೆಂಬರ್ 24ರಂದು ಅದ್ದೂರಿಯಾಗಿ ಕಾರ್ಯಕ್ರಮ ಆರಂಭವಾಗಲಿದ್ದು ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗ್ತಾರೆ ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿದೆ. ಇದೀಗ ಬಿಗ್ ಬಾಸ್ ಮನೆಯೊಳಗೆ ಹೋಗುವವರ ಪಟ್ಟಿ ಇಲ್ಲಿದೆ. ಪ್ರತಿಭಾರಿಯೂ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಹೋಗ್ತಾರೆ ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗುತ್ತೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಶುರುವಾಗುತ್ತೆ. ಇದೀಗ ಬಿಗ್ ಬಾಸ್ ಮನೆಯೊಳಗೆ ಯಾರೆಲ್ಲಾ ಹೋಗ್ತಾರೆ ಎಂಬ ಚರ್ಚೆ ಶುರುವಾಗಿದ್ದು ದೊಡ್ಮನೆ ಒಳಗೆ ಹೋಗುವವರ ಪಟ್ಟಿ ಇಲ್ಲಿದೆ. ಈಗಾಗ್ಲೆ ಬಿಗ್ ಬಾಸ್ ಓಟಿಟಿಯಲ್ಲಿ ಗಮನ ಸೆಳೆದ ಸಾನ್ಯಾ ಐಯ್ಯರ್, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದಾರೆ. ಇವರ ಜೊತೆಗೆ ಸ್ಯಾಂಡಲ್ ವುಡ್ ಸಿನಿ ರಂಗದಲ್ಲಿ ತಮ್ಮದೇ ಆದ ಚಾಪೂ ಮೂಡಿಸಿದ ನಟಿ ಪ್ರೇಮ ಎಂಟ್ರಿಕೊಡಲಿದ್ದಾರೆ. ಸಾಕಷ್ಟು ವರ್ಷಗಳಿಂದ ಚಿತ್ರರಂಗದಿಂದ ದೂರವಿರೋ ಪ್ರೇಮ ಇತ್ತೀಚೆಗೆ ಮತ್ತೆ ಗಾಂಧಿನಗರಕ್ಕೆ ಬಂದಿದ್ದಾರೆ. ಇವರು ಬಿಗ್ ಬಾಸ್ ಸೀಸನ್ 9ಗೆ ಬರೋದು ಪಕ್ಕಾ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಬರ್ತಡೇ ಸಾಂಗ್ ಹಾಡುತ್ತ ಸದ್ದು ಮಾಡ್ತಿರುವ ಕಾಫಿ ನಾಡು ಚಂದು ಬಿಗ್ ಬಾಸ್ ಮನೆಗೆ ಬರ್ತಿದ್ದಾರೆ. `ಕಮಲಿ’ ಧಾರವಾಹಿ ನಟಿ ಅಮೂಲ್ಯ ಗೌಡ ಮತ್ತು ʻಮುದ್ದುಮಣಿಗಳುʼ ನಟಿ ಸಮೀಕ್ಷಾ ದೊಡ್ಮನೆಗೆ ಬರೋದು ಕನ್ಫಾರ್ಮ್ ಆಗಿದೆ. ಇವರ ಜೊತೆಗೆ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಿಯಾಂಕ, ಮಜಾ ಭಾರತ ಶೋನಲ್ಲಿ ಹೆಸರು ಮಾಡಿರುವ ರಾಘವೇಂದ್ರ ಹಾಗೂ ಚಂದ್ರಪ್ರಭ, ಸರಿಗಮಪ ಖ್ಯಾತಿ ಆಶಾ ಭಟ್ ಬಿಗ್ ಬಾಸ್ ಸೀಸನ್ 9ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಸೆಪ್ಟೆಂಬರ್ 24ರಂದು ಬಿಗ್ ಬಾಸ್ ಸೀಸನ್ 9 ಗ್ರ್ಯಾಂಡ್ ಲಾಂಚ್ ಆಗಲಿದೆ. ಬಿಗ್ ಬಾಸ್ ಓಟಿಟಿ ಸ್ಪರ್ಧಿಗಳು ನೇರವಾಗಿ ಬಿಗ್ ಬಾಸ್ ಮನೆಗೆ ಪ್ರವೇಶಿಸಲಿದ್ದು ಈ ಭಾರಿಯ ಸೀಸನ್ 9 ಮತ್ತಷ್ಟು ಮನರಂಜನೆ ನೀಡಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now