• January 1, 2026

ಅಕ್ಷತಾ ಜೊತೆ ರಾಕೇಶ್ ಅಡಿಗ ರೊಮ್ಯಾನ್ಸ್: ಗರಂ ಆದ ಸೋನು ಗೌಡ

ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಬಿಗ್ ಬಾಸ್ ಓಟಿಟಿ ಆರಂಭವಾಗಿದ್ದು ಅಭಿಮಾನಿಗಳ ನೆಚ್ಚಿನ ಶೋ ಆಗಿ ಹೊರ ಹೊಮ್ಮಿದೆ. ಈಗಾಗ್ಲೆ ಶೋನಿಂದ ಇಬ್ಬರು ಹೊರ ಬಂದಿದ್ದು ಉಳಿದುಕೊಂಡವರು ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡ್ತಿದ್ದಾರೆ. ಈಗಾಗ್ಲೆ ಬಿಗ್ ಬಾಸ್ ಮನೆಯಲ್ಲಿ ಲವ್ವಿ ಡವ್ವಿ ಶುರುವಾಗಿದ್ದು ಜೊತೆಗೆ ವಾದ ವಿವಾದ ಕೂಡ ನಿತ್ಯ ನಡೆಯುತ್ತಲೆ ಇರುತ್ತೆ. ಸೋನು, ಟಾಸ್ಕ್‌ ಆಡುವಾಗ ಅಕ್ಷತಾ ಜೊತೆ ರಾಕೇಶ್ ಸಲಿಗೆಯಿಂದ ನಡೆದುಕೊಂಡಿದ್ದಾರೆ. ಬಳಿಕ ಸೋನು ರಾಕಿ ಮೇಲೆ ಹುಸಿ ಕೋಪ ತೋರಿದ್ದಾರೆ. ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ರಂಗು ಜೋರಾಗಿದೆ. ಮನೆಯ ಕ್ಯಾಪ್ಟನ್ ಶಿಪ್‌ಗೆ ಸ್ಪರ್ಧಿಗಳ ನಡುವೆ ಜಟಾಪಟಿ ನಡೆದಿದೆ. ಜಶ್ವಂತ್ ನಂತರ ವಾರದ ಕ್ಯಾಪ್ಟನ್ ಆಗಲು ಬಿಗ್ ಬಾಸ್ ಹೊಸ ಟಾಸ್ಕ್ ನೀಡಿದ್ದರು. ತಿರುಗುವ ಕುರ್ಚಿಯ ಮೇಲೆ 15 ನಿಮಿಷ ಕುಳಿತುಕೊಳ್ಳಬೇಕು. ಯಾರು ಹೆಚ್ಚು ಸಮಯ ಕುರುವರೋ ಅವರೇ ವಿಜೇತರು. ಸೋನು ಕೂಡ ಈ ಟಾಸ್ಕ್‌ನಲ್ಲಿ ಭಾಗವಹಿಸಿದ್ದು, ಸ್ಪರ್ಧಿ ಕುಳಿತಿರುವಾಗ ಇತರೇ ಅವರನ್ನು ಟಾಸ್ಕ್ ಕಂಪ್ಲೀಟ್ ಮಾಡದಂತೆ ತಡೆಯಬಹುದು. ಆಟದ ವೇಳೆ ಸೋನು ಗೌಡ ಮುಂದೆ, ಅಕ್ಷತಾ ಜೊತೆ ರಾಕೇಶ್ ಅಡಿಗ ಬಹಳ ಸಲುಗೆಯಿಂದ ನಡೆದುಕೊಂಡಿದ್ದಾರೆ. ಅವರ ರೊಮ್ಯಾಂಟಿಕ್ ಮಾತಿನಿಂದ ಸೋನು ಎದ್ದು ಬರಲಿ ಎಂಬುದು ರಾಕೇಶ್ ಅಕ್ಷತಾ  ಯೋಚಿಸಿದ್ದರು. ಅದರಂತೆ ಸೋನು ಮುಂದೆ ರಾಕೇಶ್‌ ಮತ್ತು ಅಕ್ಷತಾ ಬಹಳ ಸಲಿಗೆಯಿಂದ ನಡೆದುಕೊಂಡಿದ್ದರು. ಈ ಟಾಸ್ಕ್ ಅನ್ನು ಸೋನು ಯಶಸ್ವಿಯಾಗಿ ಮುಗಿಸಿದ್ದಾರೆ. ನಂತರ ಉದಯ್ ಸೂರ್ಯ ಬಳಿ ವಿಚಾರಿಸಿದ್ದಾರೆ. ಅಕ್ಷತಾ ಮತ್ತು ರಾಕೇಶ್ ಎನು ಮಾಡ್ತಿದ್ದರು ಎಂದು ಉದಯ್‌ ಬಳಿ ಚರ್ಚಿಸಿದ್ದಾರೆ. ಈ ಮೂಲಕ ಸೋನು, ರಾಕೇಶ್ ಮೇಲೆ ಹುಸಿ ಕೋಪ ತೋರಿದ್ದಾರೆ. ಸದ್ಯ ಈ ವಾರದ ಕ್ಯಾಪ್ಟನ್ ಆಗಿ ಸೋಮಣ್ಣ ಮಾಚಿಮಾಡ ಆಯ್ಕೆಯಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now