ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಉಪ್ಪಿ ಹುಟ್ಟುಹಬ್ಬಕ್ಕೆ ‘ಕಬ್ಜ’ ಸಿನಿಮಾ ತಂಡದಿಂದ ಭರ್ಜರಿ ಗಿಫ್ಟ್: ಸೆ.17ಕ್ಕೆ ಟೀಸರ್ ಔಟ್
ಕನ್ನಡಿಗರ ಹೆಮ್ಮೆಯ “ಕೆ.ಜಿ.ಎಫ್ 2” ಚಿತ್ರ ಈಗಾಗಲೇ ವಿಶ್ವದಾದ್ಯಂತ ವಿಜಯ ಪತಾಕೆ ಹಾರಿಸಿದೆ. ಕನ್ನಡಿಗರ ಮತ್ತೊಂದು ಹೆಮ್ಮೆಯ “ಕಬ್ಜ” ಚಿತ್ರ ಕೂಡ ಗೆಲ್ಲಲೇಬೇಕು. ಚಿತ್ರತಂಡದ ಅಪಾರ ಶ್ರಮದಿಂದ ನಿರ್ಮಾಣವಾಗಿರುವ “ಕಬ್ಜ” ಚಿತ್ರ ಗೆದ್ದರೆ ಕನ್ನಡ ಚಿತ್ರ ಗೆದ್ದಂತೆ. ಈ ಚಿತ್ರ ಗೆದ್ದರೆ ಮತ್ತೊಮ್ಮೆ ಬಾಲಿವುಡ್ ನಲ್ಲಿ ನಾವೇ ನಂಬರ್ ಒನ್ ಆಗಲಿದ್ದೇವೆ ಎನ್ನುತ್ತಿರುವ ಕನ್ನಡ ಕಲಾಭಿಮಾನಿಗಳು, “ಕಬ್ಜ” ಪ್ಯಾನ್ ಇಂಡಿಯಾ ಚಿತ್ರ ಪ್ರಪಂಚದಾದ್ಯಂತ ಪ್ರಚಂಡ ಯಶಸ್ಸು ಸಾಧಿಸಲಿ ಎಂದು ತುಂಬು ಮನಸ್ಸಿನಿಂದ ಹಾರೈಸುತ್ತಿದ್ದಾರೆ.
ಆರ್ ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಸೆಪ್ಟೆಂಬರ್ ಹದಿನೇಳರಂದು ಟೀಸರ್ ಬಿಡುಗಡೆಯಾಗಲಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡುವುದಾಗಿ ಆರ್ ಚಂದ್ರು ಹೇಳಿದ್ದಾರೆ.
