ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
‘ಲೋಕ’ ಸಮರಕ್ಕೆ ಬಳ್ಳಾರಿ ಸಜ್ಜು.. ಬಿಜೆಪಿ ಅಭ್ಯರ್ಥಿಯಾಗಿ ಬಳ್ಳಾರಿ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪ್ರಭಲ ಅಭ್ಯರ್ಥಿ ಬಿ.ಶ್ರೀರಾಮುಲು
ಈ ಹಿಂದೆ ರಾಜ್ಯ ಆರೋಗ್ಯ ಸಚಿವರಾಗಿದ್ದಾಗ 108 ಉಚಿತ ಆಂಬುಲೆನ್ಸ್ ಗಳನ್ನು ಮೊಟ್ಟಮೊದಲ ಬಾರಿಗೆ ರಾಜ್ಯಕ್ಕೆ ಪರಿಚಯಿಸಿದ್ದು ಇದೇ ಶ್ರೀ ರಾಮುಲು,
2006 ರಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ ಕೆಂಪೇಗೌಡ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಡಿಪಾಯ ಹಾಕಿದವರು ಶ್ರೀರಾಮುಲು.
ಎಸ್ ಟಿ ಸಮುದಾಯಕ್ಕೆ 7.5%ಗೆ ಮೀಸಲಾತಿಯನ್ನು ಏರಿಸಿದ್ದು, ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಘೋಷಣೆ, ಸುಮಾರು 60000 ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ, ಬಳ್ಳಾರಿಯಲ್ಲಿ ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್, ಬ್ಯಾಡಿಗಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ, ಬಳ್ಳಾರಿ ನಗರದಲ್ಲಿ 2014ರಲ್ಲಿ ಬೃಹತ್ ಕರೆ ಕಟ್ಟಿಸಿದ್ದು, ತುಂಗಭದ್ರಾ ನಾಲೆ, ಹಗರಿ ಕೃಷಿ ವಿಶ್ವ ವಿದ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಯಿ ಮಗು ಆಸ್ಪತ್ರೆಗಳ ನಿರ್ಮಾಣ, ಜಿಂದಾಲ್ ಜೊತೆ ಸೇರಿ 250 ಹಾಸಿಗೆಯ ಅತ್ಯಾಧುನಿಕ ಆಸ್ಪತ್ರೆಯ ನಿರ್ಮಾಣ, ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಅಂಕಿತ ಹಾಕುವ ಮೂಲಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಅನುಕೂಲವಾಗುವಂತೆ ಮಾಡಿದ್ದು ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ದೇಶಕ್ಕಾಗಿ ಇಪ್ಪತ್ನಾಲ್ಕು ಗಂಟೆಗಳೂ ದುಡಿಯುವ, ಸತ್ಯ, ಪ್ರಾಮಾಣಿಕತೆಯನ್ನೇ ಉಸಿರಾಡುವ ವಿಶ್ವವೇ ಭಾರತದೆಡೆ ತಿರುಗಿ ನೋಡುವಂತೆ ಮಾಡಿದ ಸನ್ಮಾನ್ಯ ಪ್ರಧಾನಿಗಳ ಅಗತ್ಯತೆ ದೇಶಕ್ಕೆ ಹೇಗೋ? ಬಳ್ಳಾರಿ ವಿಜಯನಗರ ಜಿಲ್ಲೆಗಳು ದೇಶದಲ್ಲೇ ಮಾದರಿ ಜಿಲ್ಲಗಳನ್ನಾಗಿಸಬೇಕೆಂದು ಪಣ ತೊಟ್ಟಿರುವ ಶ್ರೀರಾಮುಲು ಸಹ ಅವಳಿ ಜಿಲ್ಲೆಗಳಿಗೆ ಅಷ್ಟೇ ಅನಿವಾರ್ಯತೆ ಇದ್ದು ದಯಮಾಡಿ ಕ್ಷೇತ್ರದ ಎಲ್ಲಾ ಮತದಾರರು ಬಿಜೆಪಿ ಪಕ್ಷದ ಹೆಮ್ಮೆಯ ಅಭ್ಯರ್ಥಿ ಶ್ರೀ ರಾಮುಲುರವರಿಗೆ ಬಹುಮತ ನೀಡಿ ಆಯ್ಕೆ ಮಾಡ ಬೇಕೆಂಬುದು ಎಲ್ಲರ ಆಶಯವಾಗಿದೆ.

