• March 14, 2026

‘ಬನಾರಸ್’ ವಿತರಣೆ ಹಕ್ಕು ಖರೀದಿಸಿದ ಖ್ಯಾತ ಬಾಲಿವುಡ್ ಸಂಸ್ಥೆ

ಕನ್ನಡದ ಜೊತೆಗೆ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಬನಾರಸ್ ಸಿನಿಮಾದ ಬಗ್ಗೆ ಈಗಾಗ್ಲೆ ದೊಡ್ಡ ಮಟ್ಟದಲ್ಲಿ ಕ್ರೇಜ್ ಕ್ರಿಯೇಟ್ ಆಗಿದೆ. ಈಗಾಗ್ಲೆ ಟ್ರೈಲರ್ ದೊಡ್ಟ ಮಟ್ಟದಲ್ಲಿ ಸದ್ದು ಮಾಡಿದ್ದು ಬನಾರಸ್ ಸಿನಿಮಾದ ಡಿಸ್ಟ್ರಿಬ್ಯೂಷನ್ ರೈಟ್ಸ್ ನ ದೊಡ್ಡ ದೊಡ್ಡ ಸಂಸ್ಥೆಗಳು ಖರೀದಿ ಮಾಡುತ್ತಿದೆ. ಇದೀಗ ಚಿತ್ರತಂಡದ ಕಡೆಯಿಂದ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಇದೇ ನವೆಂಬರ್ 4ರಂದು ಶಾಸಕ ಜಮೀರ್ ಅಹಮದ್ ಪುತ್ರ ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಸಾಕಷ್ಟು ಅದ್ದೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗ್ಲೇ ಕೇರಳದಲ್ಲಿ ಮಲಯಾಳಂನ ಖ್ಯಾತ ಮುಳುಕುಪಾಡಂ ಸಂಸ್ಥೆ ಬನಾರಸ್ ಸಿನಿಮಾದ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದುಕೊಂಡಿದೆ. ಜೊತೆಗೆ ಕನ್ನಡದಲ್ಲಿ ಶೈಲಜಾ ನಾಗ್ ಹಾಗೂ ಬಿ.ಸುರೇಶ್ ಒಡೆತನದ ಡಿ ಬೀಟ್ಸ್ ಕಂಪನಿ ಚಿತ್ರವನ್ನು ಕರುನಾಡಿಗೆ ಹಂಚುತ್ತಿದೆ. ಇದೀಗ ಹಿಂದಿ ಭಾಷೆಯ ವಿತರಣಾ ಹಕ್ಕನ್ನು ಇನ್ನೊಂದು ಖ್ಯಾತ ಸಂಸ್ಥೆಯ ಪಾಲಾಗಿದೆ. ಬಾಲಿವುಡ್ ಸಿನಿಮಾ ರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ಪನೋರಮಾ ಸ್ಟುಡಿಯೋಸ್ ಸಂಸ್ಥೆ ಉತ್ತರ ಭಾರತದಲ್ಲಿ ಬನಾರಸ್ ಸಿನಿಮಾದ ವಿತರಣಾ ಹಕ್ಕು ಖರೀದಿಸಿದೆ. ಈಗಾಗ್ಲೆ ಸಾಕಷ್ಟು ಕಲಾವಿದರ ಚಿತ್ರಗಳನ್ನು ಪನೋರಮಾ ಸಂಸ್ಥೆ ಪಡೆದುಕೊಂಡಿದ್ದು ಯಶಸ್ಸು ಘಳಿಸಿದೆ. ಇದೀಗ ಬನಾರಸ್ ಸಿನಿಮಾದ ವಿತರಣಾ ಹಕ್ಕನ್ನು ಪನೋರಮಾ ಸ್ಟುಡಿಯೋಸ್ ಪಡೆದುಕೊಂಡಿದೆ. ಪನೋರಮಾ ಸ್ಟುಡಿಯೋಸ್ ನ ಇನ್ನೊಂದು ವಿಶೇಷತೆಯೆಂದರೆ, ಈ ಸಂಸ್ಥೆಯಲ್ಲಿ ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಪಾಲುದಾರರಾಗಿದ್ದಾರೆ. ಈ ಮೂಲಕ ಕನ್ನಡ ಮೂಲದ ಚಿತ್ರವೊಂದಕ್ಕೆ ಅಜಯ್ ದೇವಗನ್ ಹಂಚಿಕೆಯ ಸಾರಥ್ಯ ವಹಿಸಿದಂತಾಗಿದೆ. ಒಟ್ನಲ್ಲಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಮೊದಲ ಚಿತ್ರದಲ್ಲೇ ಝೈದ್ ಖಾನ್ ಸಾಕಷ್ಟು ಭರವಸೆ ಮೂಡಿಸಿದ್ದಾರೆ. ಈಗಾಗ್ಲೆ ಟ್ರೈಲರ್ ಹಾಗೂ ಹಾಡುಗಳನ್ನು ನೋಡಿ ಮೆಚ್ಚಿಕೊಂಡಿರೋ ಅಭಿಮಾನಿಗಳು ಚಿತ್ರ ನೋಡೋಕೆ ಕಾದು ಕೂತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now