• June 19, 2026

ಅಪ್ಪು ಇಲ್ಲದೆ ಶಿವಣ್ಣನ ಮೊದಲ ಸಿನಿಮಾ ಬಿಡುಗಡೆ.

‘ಬೈರಾಗಿ’ಗಾಗಿ ಅಭಿಮಾನಿಗಳ ಕಾತರ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ ‘ಬೈರಾಗಿ’ ಸಿನಿಮಾ ಇಂದು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಶಿವರಾಜ್ ಕುಮಾರ್ ಅಭಿಮಾನಿ ಬಳಗದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.   ಸಾಮಾನ್ಯವಾಗಿ ಸ್ಟಾರ್ ಸಿನಿಮಾಗಳು ಅಂದಾಕ್ಷಣ ರಾತ್ರಿ 12 ಗಂಟೆಗೆ, ಮುಂಜಾನೆ 5 ಗಂಟೆಗೆ ಅಭಿಮಾನಿಗಳಿಗಾಗಿ ಸ್ಪೆಷಲ್ ಶೋಗಳನ್ನು ಆಯೋಜಿಸಿರುತ್ತಾರೆ. ಆದರೆ ಬೈರಾಗಿ ಸಿನಿಮಾ ರಾಜ್ಯಾದ್ಯಂತ ಮಾರ್ನಿಂಗ್ ಶೋ ಮೂಲಕವೇ ರಿಲೀಸ್ ಆಗುತ್ತಿದೆ. ಶಿವ ಸೈನ್ಯ ಚಿಕ್ಕಬಳ್ಳಾಪುರದ ಸಂಘದ ವತಿಯಿಂದ ಬೆಂಗಳೂರಿನ ವಾಣಿ ಚಿತ್ರಮಂದಿರದಲ್ಲಿ 50 ಅಡಿ ಎತ್ತರದ ಶಿವರಾಜ್ಕುಮಾರ್ ಕಟೌಟ್ ನಿಲ್ಲಿಸಿ, ಹೂವಿನ ಹಾರ ಹಾಕಿ ಸಂಭ್ರಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ   ಬೆಂಗಳೂರಿನ ಮುಖ್ಯ ಚಿತ್ರಮಂದಿರ ತ್ರಿವೇಣಿಯಲ್ಲಿ ಹುಲಿ ಕುಣಿತ, ಡೊಳ್ಳು ಕುಣಿತ ಹಮ್ಮಿಕೊಳ್ಳಲಾಗಿದೆ. ಅಭಿಮಾನಿಗಳ ಜೊತೆ ಶಿವಣ್ಣ ಹಾಗು ಡಾಲಿ ಕುಳಿತು ಸಿನಿಮಾ ನೋಡಲಿದ್ದಾರೆ. ನಗರದ ನಾಲ್ಕು ಚಿತ್ರಮಂದಿರಗಳಿಗೆ ಶಿವರಾಜ್ ಕುಮಾರ್, ಧನಂಜಯ್ ಮತ್ತು ಬೈರಾಗಿ ಚಿತ್ರತಂಡ ಭೇಟಿ ನೀಡಲಿದೆ. ಶಿವಣ್ಣ-ಡಾಲಿ ಧನಂಜಯ್ ಇಬ್ಬರು ಒಟ್ಟಾಗಿ ತೆರೆ ಮೇಲೆ ಅಬ್ಬರಿಸೋದನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ದಿಯಾ ಸಿನಿಮಾದ ಪೃಥ್ವಿ ಅಂಬರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಕೃಷ್ಣ ಸಾರ್ಥಕ್ ಬಂಡವಾಳ ಹೂಡಿದ್ದು, ವಿಜಯ್ ಮಿಲ್ಟನ್ ನಿರ್ದೇಶನ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now