• January 2, 2026

ಧಾರವಾಹಿ ಶೂಟಿಂಗ್ ವೇಳೆ ನಟ ಚಂದನ್ ಕುಮಾರ್ ಗೆ ಕಪಾಳ ಮೋಕ್ಷ

ಕನ್ನಡದ ಕಿರುತೆರೆಯಲ್ಲಿ ಖ್ಯಾತಿ ಘಳಿಸಿ ಬಳಿಕ ಕೆಲ ಸಿನಿಮಾದಲ್ಲೂ ಕಾಣಿಸಿಕೊಂಡ ನಟ ಚಂದನ್ ಕುಮಾರ್ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತೆಲುಗು ತಂತ್ರಜ್ಞರು ಚಂದನ್ ಕುಮಾರ್ ಗೆ ಕಪಾಳ ಮೋಕ್ಷ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನ್ನಡದ ಜೊತೆ ಜೊತೆಗೆ ತೆಲುಗು ಧಾರವಾಹಿಗಳಲ್ಲೂ ಚಂದನ್ ಬ್ಯುಸಿಯಾಗಿದ್ದು ಅಲ್ಲೂ ಸಾಕಷ್ಟು ಜನಪ್ರಿಯತೆ ಘಳಿಸಿದ್ದಾರೆ. ಚಂದನ್ ತೆಲುಗಿನ ಸಾವಿತ್ರಮ್ಮಗಾರು ಅಬ್ಬಾಯಿ ಧಾರವಾಹಿಯ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದಾರೆ. ಹೈದರಾಬಾದ್ ನಲ್ಲಿ ಧಾರವಾಹಿಯ ಚಿತ್ರೀಕರಣ ನಡೆಯುತ್ತಿದ್ದು ಧಾರವಾಹಿ ಸೆಟ್ ನಲ್ಲಿ ತಂತ್ರಜ್ಞರು ಚಂದನ್ ಮೇಲೆ ಹಲ್ಲೆ ನಡೆಸಿದ್ದಾರೆ. ಧಾರವಾಹಿಯ ಶೂಟಿಂಗ್ ಸಂದರ್ಭದಲ್ಲಿ ಕ್ಯಾಮೆರಾಮೆನ್ ಹಾಗೂ ತಂತ್ರಜ್ಞರ ಜೊತೆ ಚಂದನ್ ಕುಮಾರ್ ಕಿರಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ಕ್ಯಾಮೆರಾ ಅಸಿಸ್ಟೆಂಟ್‍ ಮೇಲೆ ಚಂದನ್ ಹಲ್ಲೆ ನಡೆಸಿದ್ದಾರೆ. ಬಳಿಕ ತಂತ್ರಜ್ಞರು ಒಟ್ಟಾಗಿ ಚಂದನ್‍ಗೆ ನಿಂದಿಸಿದ್ದಾರೆ. ಸೀರಿಯಲ್ ತಂತ್ರಜ್ಞರ ಜೊತೆ ಮಾತಿಗೆ ಮಾತು ಬೆಳೆದು ಚಂದನ್‍ಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ. ಕಳೆದ ಒಂದು ತಿಂಗಳ ಹಿಂದೆಯೇ ಈ ಘಟನೆ ನಡೆದಿದ್ದು ಇದೀಗ ವಿಡಿಯೋ ವೈರಲ್ ಆಗಿದೆ. ಪ್ಯಾಟೆ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋ ಮೂಲಕ ಖ್ಯಾತಿ ಘಳಿಸಿದ ಚಂದನ್ ಬಳಿಕ ರಾಧಾ ಕಲ್ಯಾಣ, ಲಕ್ಷ್ಮೀ ಬಾರಮ್ಮ ಧಾರವಾಹಿಗಳ ಮೂಲಕ ಖ್ಯಾತಿ ಘಳಿಸಿದರು. ನಂತರ ಪ್ರೇಮ ಬರಹ ಸೇರಿದಂತೆ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ ಚಂದನ್ ತೆಲುಗು ಕಿರುತೆರೆಯಲ್ಲೂ ಬ್ಯುಸಿಯಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now