ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅಪ್ಪು ನೆನೆದು ವೇದಿಕೆ ಮೇಲೆ ಕಣ್ಣೀರು ಹಾಕಿದ ಅಶ್ವಿನಿ ಪುನೀತ್ ರಾಜ್ ಕುಮಾರ್
ಇಡೀ ಹಾಡನ್ನು ದುಃಖದಲ್ಲೇ ಹಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್ ಕಣ್ಣೀರು ಹಾಕುತ್ತಾ, ಅಭಿಮಾನಿಗಳಿಗೆ ನಮಸ್ಕರಿಸಿ ವೇದಿಕೆ ಮೇಲಿಂದ ಹೊರ ನಡೆದಿದ್ದಾರೆ. ಈ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದ ಅಷ್ಟು ಮಂದಿಯೂ ಭಾವುಕರಾದರು. ಜೊತೆಗೆ ಹಾಡು ಮುಗಿಯುತ್ತಿದ್ದಂತೆ ಅಪ್ಪು ಅಪ್ಪು ಎಂದು ಜೈ ಹಾಕರ ಹಾಕಿದರು.
ಇದೇ ಅ.28ರಂದು ಗಂಧದ ಗುಡಿ ಸಿನಿಮಾ ತೆರೆಗೆ ಬರ್ತಿದೆ. ಅತ್ತ ದೊಡ್ಮನೆ ಕುಟುಂಬ ಅದ್ದೂರಿಯಾಗಿ ಚಿತ್ರದ ಪ್ರಿಲೀಸ್ ಕಾರ್ಯಕ್ರಮ ಮಾಡುತ್ತಿದ್ದರೆ ಇತ್ತ ಅಭಿಮಾನಿಗಳು ಸಿನಿಮಾ ಬಿಡುಗಡೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
