ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಾಜ್ ಬಿ ಶೆಟ್ಟಿಗೆ ಗ್ರೀನ್ ಸಿಗ್ನಲ್ ಕೊಟ್ಟ ಮೋಹಕ ತಾರೆ: ಸದ್ಯದಲ್ಲೇ ಸ್ಯಾಂಡಲ್ ವುಡ್ ಪದ್ಮಾವತಿ ಕಂಬ್ಯಾಕ್
ಇತ್ತೀಚೆಗಷ್ಟೇ ರಾಜ್ ಬಿ ಶೆಟ್ಟಿ ರಮ್ಯಾ ಮನೆಗೆ ತೆರಳಿ ಸಿನಿಮಾದ ಕಥೆಯನ್ನು ಹೇಳಿ ಬಂದಿದ್ದಾರಂತೆ. ಕಥೆ ಕೇಳಿ ಫುಲ್ ಥ್ರಿಲ್ ಆದ ರಮ್ಯಾ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಕೆ.ಆರ್.ಜಿ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರಲಿದೆ ಎನ್ನುವ ಸುದ್ದಿ ಇದೆ.
ಈಗಾಗಲೇ ರಮ್ಯಾ ಕೆ.ಆರ್.ಜಿ ಸ್ಟುಡಿಯೋಗೆ ಭೇಟಿ ನೀಡಿದ್ದು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಜೊತೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರಂತೆ. ಕೆಆರ್.ಜಿ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಹೊಯ್ಸಳ ಶೂಟಿಂಗ್ ಸೆಟ್ ಗೂ ರಮ್ಯಾ ಹೋಗಿದ್ದರು. ಹೀಗಾಗಿ ರಮ್ಯಾ ಸದ್ಯದಲ್ಲೇ ಸಿನಿಮಾಗೆ ಬರ್ತಾರೆ ಎಂಬ ಸುದ್ದಿ ಜೋರಾಗಿಯೇ ಕೇಳಿ ಬರುತ್ತಿದೆ.
