• January 2, 2026

ಬಿಗ್ ಬಾಸ್ ಆಟಕ್ಕೆ ಅಂತ್ಯ ಹಾಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಓಟಿಟಿ ಮೂಲಕ ಪ್ರೇಕ್ಷಕರ ಮನ ಗೆದ್ದ ನಂಬರ್ ಗುರೂಜಿ ಎಂದೇ ಖ್ಯಾತಿ ಘಳಿಸಿದ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಸೀಸನ್ 9ರಲ್ಲೂ ಭರ್ಜರಿ ಆಟ ಆಡುತ್ತಿದ್ದಾರೆ. ನಾನು ಯಾವುದರಲ್ಲೂ ಕಮ್ಮಿ ಇಲ್ಲ ಅನ್ನೋ ರೀತಿ ಗುರೂಜಿ ಪ್ರತಿಯೊಂದು ಆಟದಲ್ಲೂ ಭಾಗಿಯಾಗುತ್ತಿದ್ದು ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಆದರೆ ಇದೀಗ ಗುರೂಜಿ ತಾವು ಮನೆಯಿಂದ ಹೊರ ಹೋಗುವುದಾಗಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಜೊತೆಗಿದ್ದ ಆರ್ಯವರ್ಧನ್ ಗುರೂಜಿ ಹಾಗೂ ನಟ ರೂಪೇಶ್ ಶೆಟ್ಟಿ ಮಧ್ಯೆ ಉತ್ತಮ ಬಾಂದವ್ಯವಿದೆ. ಅದು ಬಿಗ್ ಬಾಸ್ ಟಿವಿ ಶೋಗೆ ಬಂದ ಬಳಿಕವೂ ಮುಂದುವರೆದಿದೆ. ಈ ಹಿಂದೆ ರೂಪೇಶ್ ನನ್ನ ದೊಡ್ಡ ಮಗನಿದ್ದಂತೆ ಎಂದು ಗುರೂಜಿ ಹೇಳಿಕೊಂಡಿದ್ದರು. ಇದೀಗ ರೂಪೇಶ್ ಬಳಿಯೇ ಮನೆಯಿಂದ ಹೊರ ಹೋಗುವುದಾಗಿ ಹೇಳಿ ಅಳಲು ತೋಡಿಕೊಂಡಿದ್ದಾರೆ. ಸಾಕಷ್ಟು ಭಾರಿ ಮನೆಯ ಸ್ಪರ್ಧಿಗಳ ಜೊತೆ ನೇರಾ ನೇರವಾಗಿ ಮಾತನಾಡಿ ಮನೆ ಮಂದಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಗುರೂಜಿ ಬಿಗ್ ಬಾಸ್ ಆಟಕ್ಕೆ ಕೊನೆ ಹಾಡಿ ಮನೆಯತ್ತ ಹೊರಡಲು ಮುಖ ಮಾಡಿದ್ದಾರೆ. ಮುದ್ದು ಮಗಳನ್ನು ನೋಡುವ ತವಕ ಜಾಸ್ತಿ ಆಗಿದೆ. ಇದೀಗ ಬಿಗ್ ಮನೆಯಿಂದ ಹೊರ ಹೋಗುವುದಾಗಿ ರೂಪೇಶ್ ಶೆಟ್ಟಿ ಬಳಿ ಗುರೂಜಿ ಹೇಳಿಕೊಂಡಿದ್ದಾರೆ. ಈ ವಾರ ನನ್ನನ್ನು ಕಳಿಸಿಕೊಡಿ ಅಂತ ಕೇಳ್ತೀನಿ ಎಂದು ಗುರೂಜಿ, ರೂಪೇಶ್ ಬಳಿ ಹೇಳಿಕೊಂಡಿದ್ದಾರೆ. ಆರಾಮಾಗಿ ಇದೀರಲ್ಲ. ಮತ್ಯಾಕೆ ಹೋಗೋ ಚಿಂತೆ ನಿಮಗೆ ಈಗ ಮನೆಯಿಂದ ಔಟ್ ಆದ್ರೆ ಮತ್ತೆ ನೀವು ಬರೋಕೆ ಆಗಲ್ಲ ಎಂದು ಹೇಳಿದರು ರೂಪೇಶ್. ಆಯ್ಕೆ ಇದ್ರೆ ಕಳಿಸಿಕೊಡಿ ಎಂದು ಕೇಳ್ತಿನಿ. ಹಾಗೆ ಆಯ್ಕೆ ಇಲ್ಲ ಅಂದ್ರೆ ಇಲ್ಲೇ ಮುಂದುವರಿಯುತ್ತೀನಿ. ನಾನು ಮನೆಯಿಂದ ಹೊರಹೋಗಬೇಕು. ಇಲ್ಲಿಗೆ ಬಂದು ಏನು ಆಗಬೇಕಿಲ್ಲ. 10 ವಾರ ಇದ್ರೂ ನನ್ನ ವ್ಯಕ್ತಿತ್ವ ಇರೋದು ಹೀಗೆ. ಇಷ್ಟು ದಿನ ಇದ್ದಿದ್ದು ಖುಷಿ ನೀಡಿದೆ ಎಂದು ಗುರೂಜಿ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now