ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಿಗ್ ಬಾಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ ಆರ್ಯವರ್ಧನ್ ಗುರೂಜಿ: ಖಡಕ್ ವಾರ್ನಿಂಗ್ ಕೊಟ್ಟ ಕಿಚ್ಚ ಸುದೀಪ್
ಸೂಪರ್ ಸಂಡೇ ವಿತ್ ಸುದೀಪ ವೀಕೆಂಡ್ ಕಾರ್ಯಕ್ರಮದಲ್ಲಿ ಸುದೀಪ್ ಎಂದಿನಂತೆ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ. ಸ್ಪರ್ಧಿಗಳಿಗೆ ಪ್ರಶ್ನೆ ಕೇಳಿದ್ದಾರೆ. ಟಾಪ್ 2 ಯಾರು ಆಗ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಸ್ಪರ್ಧಿಗಳು ಒಬ್ಬೊಬ್ಬರ ಹೆಸರನ್ನು ಹೇಳಿದ್ದಾರೆ. ಈ ವೇಳೆ ಗುರೂಜಿ, ಅನುಪಮಾ ಹೆಸರು ಹೇಳಿ ಬಿಗ್ ಬಾಸ್‌ಗೂ ಅನುಪಮಾ ಒಳಗಡೆ ಬರ್ಬೇಕು ಅಂತ ಆಸೆ ಇತ್ತು ಎಂದು ಹೇಳಿದರು. ಇದರಿಂದ ಕೆರಳಿದ ಸುದೀಪ್ ಹಾಗೆಲ್ಲ ಮಾತನಾಡಬೇಡಿ ಸರ್ ಎಂದರು. ಬಂಗಾರದ ಟಾಸ್ಕ್‌ನಲ್ಲಿ ಎಷ್ಟು ಬಂಗಾರ ಇದೆ ಅಂತ ಗೊತ್ತಿದ್ದರೂ ಅನುಪಮಾನ ಒಳಗಡೆ ಕರೆಸುತ್ತಾರೆ ಅಂದರೆ ಏನು ಅರ್ಥ. ಮ್ಯಾಚ್ ಫಿಕ್ಸಿಂಗ್ ಆಗಿದೆ ಇಲ್ಲಿ ಎಂದು ಗಂಭೀರ ಆರೋಪ ಮಾಡಿದರು. ಸುದೀಪ್ ಸ್ಪರ್ಧಿಗಳಲ್ಲಿ ನಿಮಗೆ ಹಾಗೆ ಅನಿಸಿತಾ ಎಂದು ಕೇಳಿದರು. ಸ್ಪರ್ಧಿಗಳೆಲ್ಲಾ ಇಲ್ಲಾ ಎಂದರು.
ಗುರೂಜಿ ಮಾತಿನಿಂದ ಮತ್ತಷ್ಟು ಕೋಪಗೊಂಡ ಸುದೀಪ್ ಮಾತಿನ ಮೇಲೆ ನಿಗಾ ಇರಲಿ ಎಂದು ಎಚ್ಚರಿಕೆ ನೀಡಿದರು. ಆದರೂ ಸಹ ಗುರೂಜಿ ಯೋಚನೆ ಮಾಡಿ ಹೇಳಬೇಕಲ್ಲ ಹಾಗಾಗಿ ಹೇಳುತ್ತಿದ್ದೀನಿ ಎಂದು ತನ್ನ ಮಾತನ್ನು ಸಮರ್ಥಿಸಿಕೊಂಡರು. ಮ್ಯಾಚ್ ಫಿಕ್ಸಿಂಗ್ ಅಂದರೆ ಏನು ಅಲ್ಲಿ ಕುಳಿತು ಆಡುತ್ತಿರುವವರೆಲ್ಲ ಏನು ಹಾಗಾದ್ರೆ, ಯಾರಿಗೂ ಯೋಗ್ಯತೆ ಇಲ್ವಾ, ಮೋಸ ಮಾಡಿ ಗೆಲ್ತಾ ಇದ್ದಾರಾ ಎಂದು ಸುದೀಪ್ ಖಡಕ್ ಆಗಿ, ಕೇಳಿದ್ದರು. ಸಹಜವಾಗಿ ನಾನು ಹೇಳಿದ್ದು ಎಂದು ಆರ್ಯವರ್ದನ್ ಮತ್ತೆ ಪ್ರತಿಕ್ರಿಯಿಸಿದರು.
ನಿಮ್ಮ ವ್ಯಕ್ತಿತ್ವದ ಮೇಲೆ ಮಾತನಾಡಿದರೆ ಇಷ್ಟು ಉದ್ದ ಮಾತನಾಡುತ್ತೀರಾ. ಈ ವೇದಿಕೆ ಮರ್ಯಾದೆ ತೆಗೆದರೆ ಸತ್ಯವಾಗಿ ಹೇಳ್ತೀನಿ, ನನಗೆ ನಿಮಗೆ ಇಲ್ಲೆ ಕೊನೆಯಾಗುತ್ತೆ ಎಂದು ಸುದೀಪ್ ಖಡಕ್ ವಾರ್ನಿಂಗ್ ನೀಡಿದ್ದಾರೆ.
