ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಾಕೇಶ್ ಗಾಗಿ ಮನೆಯವರ ಕೆಂಗಣ್ಣೀಗೆ ಗುರಿಯಾದ ಸೋನು ಗೌಡ
ಬಿಗ್ ಬಾಸ್ ಮನೆಯೊಳಗೆ ಒಬ್ಬರ ಪರವಾಗಿ ಮತ್ತೊಬ್ಬರು ಧ್ವನಿ ಎತ್ತುವುದು ಕಾಮನ್. ಸದ್ಯ ರಾಕೇಶ್ ಗಾಗಿ ಸೋನು ಧ್ವನಿಯೆತ್ತಿದ್ದು ಇದರಿಂದ ಮನೆಯವರ ಕೆಂಗಣ್ಣೀಗೆ ಸೋನು ಗುರಿಯಾಗಿದ್ದಾರೆ.
ಆರ್ಯವರ್ಧನ್ ಗುರೂಜಿ ಮನೆಯವರಿಗಾಗಿ ಪಪಾಯ ಹಣ್ಣು ಕಟ್ ಮಾಡಿ ಕೊಟ್ಟಿದ್ದಾರೆ. ಈ ವೇಳೆ ಸೋನು, ರಾಕಿಗೆ ಮೂರು ಪೀಸ್ ಪಪಾಯ ಎಂದಿದ್ದಾರೆ. ಆಗ ಸೋಮಣ್ಣ ಮಾಚಿಮಾಡ, ಅವರು ನಿನಗೆ ಮಾತ್ರ ಕಾಣುತ್ತಾರಾ ಎಂದಿದ್ದಾರೆ. ಬಳಿಕ ರಾಕೇಶ್‌ಗಾಗಿ ಬಿಗ್ ಬಾಸ್ ಮನೆಯಲ್ಲಿ ಎರಡು ಮನೆ ಮಾಡಬೇಕಾ ಎಂದು ಗುರೂಜಿ ಕೂಡ ಸೋನು ವಿರುದ್ಧ ಗರಂ ಆಗಿದ್ದಾರೆ.
ಇದಕ್ಕೆ ಸೋನು ಕೂಡ ಪ್ರತಿಕ್ರಿಯೆ ನೀಡಿದ್ದು, ಮಾತನಾಡಬೇಕಾದ್ರೆ ಸರಿಯಾಗಿ ಮಾತನಾಡು ಅಂತಾ ನನಗೆ ಹೇಳುತ್ತೀರಾ. ನೀವು ಕೂಡ ಮಾತನಾಡಬೇಕಾದ್ರೆ ನಿಗಾ ಇಟ್ಕೋಂಡು ಮಾತನಾಡಿ ಎಂದು ಸೋನು ಗುರೂಜಿ ವಿರುದ್ಧ ಗರಂ ಆಗಿದ್ದಾರೆ. ಅದಕ್ಕೆ ಸುಮ್ಮನೆ ಕೂತ್ಕೋ ನೀನು, ಗಂಟಲು ಹರ್ಕೋ ಬೇಡ ಎಂದು ಗುರೂಜಿ ಸೋನುಗೆ ವಾರ್ನ್ ಮಾಡಿದ್ದಾರೆ.
