• March 14, 2026

‘ಜೊತೆ ಜೊತೆಯಲಿ’ ಧಾರವಾಹಿ ಗಲಾಟೆ ಬಳಿಕ ಬಿಗ್ ಬಾಸ್ ಮನೆಗೆ ನಟ ಅನಿರುದ್ಧ್ ಎಂಟ್ರಿ?

ಬಿಗ್ ಬಾಸ್ ಕನ್ನಡ ಓಟಿಟಿಗೆ ಈ ವಾರ ತೆರೆ ಬೀಳಲಿದೆ. ಹೀಗಾಗಿ ಬಿಗ್ ಬಾಸ್ ಸೀಸನ್ 9ರ ಪ್ರಮೋಗಳನ್ನು ವಾಹಿನಿಗಳು ಪ್ರಸಾರ ಮಾಡುತ್ತಿವೆ. ಈ ಮಧ್ಯೆ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಹೋಗ್ತಾರೆ ಎಂಬ ಕುತೂಹಲ ಶುರುವಾಗಿದೆ. ಸದ್ಯ ನಟ ಅನಿರುದ್ಧ್ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹೊರ ಬಂದಿರುವ ಅರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಮುಂದಿನ ನಡೆ ಏನು? ಸಿನಿಮಾದಲ್ಲಿ ನಟಿಸುತ್ತಾರಾ? ಅಥವಾ ಧಾರಾವಾಹಿಯಲ್ಲಿ ಬಣ್ಣ ಹಚ್ಚುತ್ತಾರಾ ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಆಗಿತ್ತು.ಆದರೆ ಇದೀಗ ದೊಡ್ಮನೆಗೆ ಎಂಟ್ರಿಕೊಡೋಕೆ ಅನಿರುದ್ಧ್ ರೆಡಿಯಾಗಿದ್ದಾರೆ. ಮೂಲಗಳ ಪ್ರಕಾರ ಸಾಕಷ್ಟು ಹಿಂದೆಯೇ ಬಿಗ್ ಬಾಸ್ ಮನೆಗೆ ಅನಿರುದ್ಧ್ ಹೋಗ್ತಾರೆ ಎನ್ನಲಾಗಿತ್ತು. ಇದೇ ಕಾರಣಕ್ಕೆ ಅನಿರುದ್ಧ್ ಧಾರವಾಹಿಯನ್ನು ಬಿಡಲಿದ್ದಾರೆ ಅಥವಾ ಧಾರವಾಹಿಯನ್ನು ಬೇಗ ಮುಗಿಸಲು ಹೇಳಿದ್ದಾರೆ ಎಂದು ಸುದ್ದಿ ಸೆಟ್ ನಲ್ಲಿ ಹರಿದಾಡಿತ್ತು. ಜೊತೆಗೆ ವಾಹಿನಿ ಕೂಡ ಅನಿರುದ್ಧ್ ಅವರನ್ನು ದೊಡ್ಮನೆಗೆ ಎಂಟ್ರಿಕೊಡುವಂತೆ ಕೇಳಿಕೊಂಡಿತ್ತು. ಹೀಗಾಗಿ ಈ ಭಾರಿ ಬಿಗ್ ಬಾಸ್ ಮನೆಗೆ ಅನಿರುದ್ಧ್ ಎಂಟ್ರಿಕೊಡೋದು ಅನ್ಪಾರ್ಮ್ ಆಗಿದೆ. ಮತ್ತೊಂದು ಕಡೆ ಜೊತೆ ಜೊತೆಯಲಿ ಸೀರಿಯಲ್ ಸೆಟ್ ನಲ್ಲಿ ನಡೆದ ಮಾತಿನ ಚಕಮಕಿಯಿಂದ ಅನಿರುದ್ಧ್ ಅವರನ್ನು ರಿಯಾಲಿಟಿ ಶೋ ಹಾಗೂ ಸೀರಿಯಲ್ ನಿಂದ ಬ್ಯಾನ್ ಮಾಡಲಾಗಿದೆ. ಅಲ್ಲದೆ ಈ ಬಗ್ಗೆ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಈಗಾಗಲೇ ಕನ್ನಡದ ಅಷ್ಟೂ ಮನರಂಜನಾ ವಾಹಿನಿಗಳಿಗೆ ಮನವಿ ಮಾಡಿವೆ. ಆದರೆ ಇದನ್ನು ವಾಹಿನಿ ಎಷ್ಟರ ಮಟ್ಟಿಗೆ ಪಾಲಿಸುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now