ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅನುಷ್ಕಾ ಶೆಟ್ಟಿ ಸಿನಿ ಜರ್ನಿಗೆ 17 ವರ್ಷ: ಕೇಕ್ ಕತ್ತರಿಸಿ ಸಂಭ್ರಮಿಸಿದ ನಟಿ
ತೆಲುಗಿನ ಸೂಪರ್ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ಅನುಷ್ಕಾ ಶೆಟ್ಟಿ ಹಲವು ಬಗೆಯ ಪಾತ್ರಗಳ ಮೂಲಕವೇ ಅಭಿಮಾನಿಗಳ ಮನಸೂರೆಗೊಂಡ ನಾಯಕಿ. ತೆಲುಗಿನ ಜೊತೆ ತಮಿಳು ಚಿತ್ರರಂಗದಲ್ಲೂ ಮಿಂಚಿದ ನಟಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.
17 ವರ್ಷಗಳ ಸಿನಿಮಾ ಜರ್ನಿಯನ್ನು ತಮ್ಮ ಹೊಸ ಚಿತ್ರತಂಡದ ಸದಸ್ಯರ ಜೊತೆ ಕೇಕ್ ಕತ್ತರಿಸುವ ಮೂಲಕ ಸಂಭ್ರಮಿಸಿದ್ದಾರೆ. 17 ವರ್ಷಗಳ ಸಿನಿ ಜರ್ನಿಯಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅನುಷ್ಕಾ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಬಾಹುಬಲಿ ಸಿನಿಮಾದ ದೇವಸೇನಾ ಪಾತ್ರದಲ್ಲಿ ವಿಶ್ವದಾದ್ಯಂತ ಗುರುತಿಸಿಕೊಂಡು ಅನುಷ್ಕಾ ಶೆಟ್ಟಿ ನವೀನ್ ಪೋಲಿ ಶೆಟ್ಟಿ ನಟನೆಯ ಹೊಸ ಸಿನಿಮಾದ ನಾಯಕಿಯಾಗಿ ಹೊಸ ಪ್ರಾಜೆಕ್ಟ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅನುಷ್ಕಾ ಸಿನಿ ಜರ್ನಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
