• June 19, 2026

ಪತಿಯ ನಿಧನದ ಬೆನ್ನಲ್ಲೆ ನಟಿ ಮೀನಾಗೆ ಮತ್ತೊಂದು ಶಾಕ್: ವಿದ್ಯಾಸಾಗರ್ ಕೋಟಿ ಕೋಟಿ ಆಸ್ತಿಯಲ್ಲಿ ಬಿಡಿಗಾಸು ಈಕೆಗಿಲ್ಲವಂತೆ

ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾ ಸಾಗರ್ ಇತ್ತೀಚೆಗಷ್ಟೇ ನಿಧನ ಹೊಂದಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾಸಾಗರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಅವರ ಸಾವಿನ ಸುತ್ತ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದವು.   ವಿದ್ಯಾಸಾಗರ್ ಕೋವಿಡ್ ನಿಂದ ಮೃತಪಟ್ಟಿದ್ದರು ಎಂಬ ಸುದ್ದಿ ಹರಿದಾಡಿದ್ದು ಈ ಬಗ್ಗೆ ಪತ್ನಿ ಮೀನಾ ಸ್ಪಷ್ಟನೆ ನೀಡಿದ್ದರು. ವಿದ್ಯಾ ಸಾಗರ್ ಅವರನ್ನು ಕಳೆದುಕೊಂಡ ನಮ್ಮ ಕುಟುಂಬ ನೋವಿನಲ್ಲಿದ್ದು ಕೆಲ ದಿನಗಳ ಕಾಲ ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದರು. ಮತ್ತೊಂದು ಮೂಲಗಳ ಪ್ರಕಾರ ಮೀನಾ ಮನೆಯಲ್ಲಿ ಸಾಕಷ್ಟು ಪರಿವಾಳಗಳನ್ನು ಸಾಕಿದ್ದು ಅವುಗಳ ಹಿಕ್ಕಿಯಿಂದ ಅನಾರೋಗ್ಯ ಉಂಟಾಗಿ ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಈ ಮಧ್ಯೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಉದ್ಯಮಿಯಾಗಿರುವ ಮೀನಾ ಪತಿ ವಿದ್ಯಾಸಾಗರ್ ಸುಮಾರು 250 ಕೋಟಿಯ ಒಡೆಯ. ಆದರೆ ತಾವು ಸಾಯುವ ಮುನ್ನ ವಿಲ್ ಬರೆದಿರುವ ವಿದ್ಯಾಸಾಗರ್ ಪತ್ನಿಯ ಹೆಸರಿಗೆ ಬಿಡಿಗಾಸನ್ನು ಬರೆದಿಲ್ಲವಂತೆ. ತನ್ನ ಸಂಪೂರ್ಣ ಆಸ್ತಿಯನ್ನು ಮಗಳು ನೈನಿಕಾ ಹೆಸರಿಗೆ ಬರೆದಿರೋದಾಗಿ ವರದಿಯಾಗಿದೆ. ಕೋಟ್ಯಾಂತರ ಮೌಲ್ಯದ ಆಸ್ತಿಯ ಒಡೆಯರಾಗಿದ್ದ ಜೋಡಿಗಳಿಗೆ ನೆಮ್ಮದಿಯೇ ಇಲ್ಲದಂತಾಗಿತ್ತು. ಆಸ್ತಿಯ ವಿಚಾರವಾಗಿ ಮೀನಾ ಹಾಗೂ ವಿದ್ಯಾಸಾಗರ್ ಮಧ್ಯೆ ಆಗಾಗ ಜಗಳಗಳು ನಡೆಯುತ್ತಿತ್ತು ಎಂಬ ಸುದ್ದಿಯೂ ಹರಿದಾಡಿತ್ತು. ಮಗಳು ನೈನಿಕಾ ವಯಸ್ಸಿಗೆ ಬಂದ ಬಳಿಕ ಆಕೆಯ ಇಚ್ಚೆಯಂತೆ ಮಗಳ ಪತಿ ಉತ್ತರಾಧಿಕಾರಿ ಆಗಬಹುದು ಎನ್ನಲಾಗುತ್ತಿದೆ. ಸದ್ಯ ತಮಿಳು ಚಿತ್ರರಂಗದಲ್ಲಿ ವಿಲ್ ವಿಚಾರ ಜೋರಾಗಿ ಸದ್ದು ಮಾಡ್ತಿದ್ದು ಗಬ್ಬಿಕೊಂಡಿರುವ ಅಂತೆ ಕಂತೆಗಳಿಗೆ ನಟಿ ಮೀನಾ ಸ್ಪಷ್ಟನೆ ನೀಡುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now