• January 2, 2026

ಬಿಗ್ ಬಾಸ್ ನಿಂದ ಆಫರ್ ಬಂದಿಲ್ಲ, ಬಂದರೂ ಹೋಗುವುದಿಲ್ಲ: ನಟ ಅನಿರುದ್ಧ್ ಸ್ಪಷ್ಟನೆ

ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದಿರೋ ನಟ ಅನಿರುದ್ಧ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಬಿಗ್ ಬಾಸ್ ಸೀಸನ್ ಶುರುವಾಗಲು ಇನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಹೀಗಾಗಿ ದೊಡ್ಮನೆ ಒಳಗೆ ಯಾರೆಲ್ಲಾ ಹೋಗ್ತಾರೆ ಎಂಬ ಕುತೂಹಲ ಶುರುವಾಗಿದ್ದು ನಟ ಅನಿರುದ್ಧ್ ಬಿಗ್ ಬಾಸ್ ಗೆ ಹೋಗ್ತಾರೆ ಎನ್ನಲಾಗ್ತಿದೆ. ಈ ಬಗ್ಗೆ ಸ್ವತಃ ನಟ ಅನಿರುದ್ಧ್ ಸ್ಪಷ್ಟನೆ ನೀಡಿದ್ದಾರೆ. ಬಿಗ್ ಬಾಸ್ ಮನೆಗೆ ಪ್ರವೇಶಿಸಲು ಅನಿರುದ್ಧ್ ಅವರಿಗೆ ಆಫರ್ ಮಾಡಲಾಗಿದೆ. ಅನಿರುದ್ಧ್ ಕೂಡ ಈ ಆಫರ್ ಒಪ್ಪಿಕೊಂಡಿದ್ದಾರೆ. ಇದೇ ಕಾರಣಕ್ಕೆ ಅನಿರುದ್ಧ್ ಜೊತೆ ಜೊತೆಯಲಿ ಧಾರವಾಹಿಯನ್ನು ಬೇಗನೆ ಮುಗಿಸುವಂತೆ ಕೇಳಿದ್ದರು ಎಂಬ ಸುದ್ದಿ ಹರಿದಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ಅನಿರುದ್ಧ್ ನನಗೆ ಬಿಗ್ ಬಾಸ್ ನಿಂದ ಯಾರು ಅಪ್ರೋಚ್ ಮಾಡಿಲ್ಲ. ಮಾಡಿದರೂ ನಾನು ಹೋಗಲ್ಲ ಎಂದಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ಆರಂಭಕ್ಕೂ ಮುನ್ನ ಪ್ರತಿಭಾರಿ ದೊಡ್ಮನೆ ಒಳಗೆ ಯಾರೆಲ್ಲಾ ಹೋಗ್ತಾರೆ ಎಂಬ ಪ್ರಶ್ನೆ ಎದುರಾಗುತ್ತೆ. ಸಾಕಷ್ಟು ಸೆಲೆಬ್ರಿಟಿಗಳ ಹೆಸರು ಕೂಡ ಕೇಳಿ ಬರುತ್ತೆ. ಆದರೆ ಕೊನೆಯಲ್ಲಿ ಕೆಲವೇ ಕೆಲವು ಮಂದಿ ಮಾತ್ರ ದೊಡ್ಮನೆ ಒಳಗೆ ಎಂಟ್ರಿಕೊಡ್ತಾರೆ. ಅಂತೆಯೇ ಈ ಭಾರಿ  ಅನಿರುದ್ಧ್ ಹೆಸರು ಕೇಳಿ ಬಂದಿದ್ದು ಇದಕ್ಕೆ ಸ್ವತಃ ಅನಿರುದ್ಧ್ ಸ್ಪಷ್ಟನೆ ನೀಡಿರುವುದರಿಂದ ಹರಿದಾಡುತ್ತಿರುವ ಅಂತೆ ಕಂತೆಗಳಿಗೆ ಬ್ರೇಕ್ ಬಿದ್ದಿದೆ. ನಟನೆಯ ಜೊತೆಗೆ ಅನಿರುದ್ಧ್ ಸಾಮಾಜಿಕ ಕೆಲಸಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ನನಗೆ ಬಿಗ್ ಬಾಸ್ ನಿಂದ ಯಾವುದೇ ಆಫರ್ ಬಂದಿಲ್ಲ. ಬಂದರೂ ನಾನು ಹೋಗುವುದಿಲ್ಲ. ಮೂರು ತಿಂಗಳು ಅಲ್ಲಿ ಹೋದರೆ ಇಲ್ಲಿ ಮಾಡಬೇಕಿರುವ ಕೆಲಸಗಳು ನಿಂತು ಹೋಗುತ್ತವೆ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now