• March 14, 2026

ನಾಲ್ಕು ಗೋಡೆಗಳ ಮಧ್ಯೆ ಆಗಿರೋ ಜಗಳ, ಬೀದಿಗೆ ತರಬಾರದು: ಅನಿರುದ್ಧ್

ಜೀ ಕನ್ನಡದಲ್ಲಿ ಪ್ರಸಾರವಾಗುವ ಖ್ಯಾತ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಇನ್ನು ಮುಂದೆ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಇರುವುದಿಲ್ಲ ಎಂದು ವಾಹಿನಿ ಸ್ಪಷ್ಟ ಪಡಿಸಿದೆ. ಈ ಮಧ್ಯೆ ಅನಿರುದ್ಧ್ ಅವಕಾಶ ನೀಡಿದರೆ ಧಾರಾವಾಹಿಯಲ್ಲಿ ನಟಿಸುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಧಾರಾವಾಹಿ ತಂಡ ಸುತಾರಾಂ ಒಪ್ಪುವುದು ಅನುಮಾನ ಎಂಬಂತಾಗಿದೆ. ಧಾರಾವಾಹಿಯಿಂದ ಕೈ ಬಿಟ್ಟಿರುವ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ಅನಿರುದ್ಧ್ ನಾಲ್ಕು ಗೋಡೆ ಮಧ್ಯೆ ಜಗಳವಾಡಿರೋದು ಬೀದಿಗೆ ತರಬಾರದು ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅನಿರುದ್ಧ್, ನಾನು ಕೆಲಸ ಮಾಡ್ತಿರೋ ಯಾವುದೇ ಕ್ಷೇತ್ರವಾಗಿರಬಹುದು ಅಥವಾ ಜೊತೆ ಜೊತೆಯಲಿ ಸೀರಿಯಲ್ ಸೆಟ್‍ಲ್ಲಿ ಅಹಂಕಾರ ನೋಡಿದ್ದೀರಾ, ಸೆಟ್‍ನಲ್ಲಿ ಕೆಲಸಕ್ಕಾಗಿ ಜಗಳ ಮಾಡಿದ್ದೀನಿ. ಮನುಷ್ಯನಿಗೆ ಕೋಪ ಸಹಜ. ನಾನು ಸಾಮಾಜಿಕ ಕೆಲಸ ಮಾಡುತ್ತೇನೆ. ಕಸದ ಹತ್ತಿರ ನಿಂತು ವಿಡಿಯೋ ಮಾಡಿದ್ದೀನಿ. ದುರಂಹಕಾರ ಇದ್ದಿದ್ರೆ ಈ ರೀತಿ ಮಾಡ್ತಿದ್ನಾ ಎಂದರು. ಜೊತೆ ಜೊತೆಯಲಿ ಧಾರಾವಾಹಿಗೆ ಟೀಂ ವರ್ಕ್ ಹಾಗೂ ಜನರ ಹಾರೈಕೆಗೆ ಸಿಕ್ಕಿರೋ ಯಶಸ್ಸು. ಧಾರಾವಾಹಿಯಲ್ಲಿ ನಟಿಸೋ ಮೊದಲು ನಾನು ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದೇನೆ. ಅಲ್ಲಿಯೂ ನನಗೆ ಯಶಸ್ಸು ಸಿಕ್ಕಿದೆ. ನನ್ನ ಅಭಿನಯಕ್ಕೆ ತುಂಬಾ ಜನ ಒಳ್ಳೆಯ ಮಾತು ಹೇಳಿದ್ದಾರೆ. ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದಾರೆ. ಇದಕ್ಕಿಂತ ಯಶಸ್ಸು ಬೇಕಾ, 20 ದಾಖಲೆಗಳನ್ನ ಸೃಷ್ಟಿ ಮಾಡಿದ್ದೀನಿ ಎಂದು ಹೇಳಿದರು. ನಾನು ಶ್ರದ್ಧೆಯಿಂದ ಕೆಲಸ ಮಾಡಿದ್ದೀನಿ. ಅಭಿಮಾನಿಗಳ ಪ್ರೀತಿ, ಕುಟುಂಬದರ ಹಾರೈಕೆ ಇದೆ. ನನಗೆ ಕೆಲಸ ಸಿಕ್ಕೇ ಸಿಗುತ್ತದೆ. ನನಗೆ ಇನ್‍ಸೆಕ್ಯೂರಿಟಿ ಬರಲು ಸಾಧ್ಯವೇ ಇಲ್ಲ. ಸಿನಿಮಾಗಳಲ್ಲಿ ಕೆಲ ವರ್ಷ ಕೆಲಸ ಇರಲಿಲ್ಲ. ಅಗಲೇ ಆರಾಮಾಗಿ ಇದ್ದೇ ಇವಾಗ ಕೆಲಸ ಸಿಗಲ್ವಾ ಎಂದು ಪ್ರಶ್ನಿಸಿದರು. ಕ್ಯಾರೆವನ್ ಕೇಳಲು ನಾನೇನು ಹುಚ್ಚನಾ, ಹೆಣ್ಣುಮಕ್ಕಳಿಗೋಸ್ಕರ ಕೇಳಿರೋದು. ನನ್ನ ಕೇಳದೆ ಎರಡು ವರ್ಷ ಯಾವ ಚಾನೆಲ್‍ನಲ್ಲೂ ಆ್ಯಕ್ಟ್ ಮಾಡಬಾರದು ಅಂತ ನಿರ್ಬಂಧ ಹಾಕಿದ್ದಾರೆ. ಓನ್ ಸೈಡ್ ಮಾಡ್ತಿದ್ದಾರೆ. ಭಾರತಿ ವಿಷ್ಣುವರ್ಧನ್ ಸಹ ಹೇಳಿದ್ರು, ವಿಷ್ಣುಗಾಗಿರೋದೆ ನಿನಗಾಗಿರೋದು. ಅವರದೇ ನೆನಪು ಬಂತು ಅಂದರು. ನಮ್ಮ ಕುಟುಂಬಕ್ಕೆ ಹೋರಾಟ ಹೊಸದಲ್ಲ ಎಂದರು. ಇಷ್ಟೇಲ್ಲ ಅದ್ರು ಮತ್ತೆ ಅವ್ರು ನನ್ನ ಜೊತೆ ಮಾತನಾಡಿದ್ರೆ ನಾನು ಆಕ್ಟ್ ಮಾಡ್ತಿನಿ. ಇಷ್ಟು ರದ್ದಾಂತ ಅದ ಮೇಲು ಅವರ ಜೊತೆ ಆಕ್ಟ್ ಮಾಡೊದು ಸುಲಭ ಅಲ್ಲ. ಅದ್ರು  ನನ್ನ ಪಾತ್ರಕ್ಕಾಗಿ ಅಭಿಮಾನಿಗಳಿಗಾಗಿ ನಾನು ಆಕ್ಟ್ ಮಾಡ್ತಿನಿ. ಅದ್ರೆ ಸ್ಕ್ರಿಪ್ಟ್ ವಿಚಾರದಲ್ಲಿ ನಾನು ಮತ್ತೆ ಪ್ರಶ್ನೆ ಮಾಡ್ತಿನಿ. ನನ್ನ ಸಂಭಾವನೆ ಅಧಿಕ ಇದೆ ಅಂದ್ರೆ ಅದು ಖುಷಿಯ ವಿಚಾರ.ಒಂದು ವೇಳೆ ಅವರು ಮತ್ತೆ ಕರೆಯೋದೆ ಇಲ್ಲ ಅಂದ್ರೆ ಅದು ಅವರ ನಿರ್ಧಾರ ಎಂದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now