ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿರಾಟ್ ಕೊಹ್ಲಿಯ ಹೋಟೆಲ್ ರೂಮ್ ವಿಡಿಯೋ ಲೀಕ್: ಅಸಮಾಧಾನ ಹೊರ ಹಾಕಿದ ಅನುಷ್ಕಾ
ಈ ವಿಡಿಯೋವನ್ನು ಹಂಚಿಕೊಂಡಿರುವ ವಿರಾಟ್ ಕೊಹ್ಲಿ, “ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ನೋಡಲು ತುಂಬಾ ಸಂತೋಷಪಟ್ಟಿದ್ದಾರೆ ಎಂಬುದನ್ನು ನಾನು ಒಪ್ಪುತ್ತೇನೆ. ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ನಾನು ಯಾವಾಗಲೂ ಅದನ್ನು ಪ್ರಶಂಸಿಸುತ್ತೇನೆ ಆದರೆ ಈ ವಿಡಿಯೋ ತುಂಬಾ ಅಪಾಯಕಾರಿ. ಇದು ನನಗೆ ಖಾಸಗಿತನದ ಬಗ್ಗೆ ತುಂಬಾ ಕೆಟ್ಟ ಭಾವನೆ ಮೂಡಿಸಿದೆ. ನನ್ನ ಹೋಟೆಲ್ ಕೋಣೆಯಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ನನಗೆ ಸಾಧ್ಯವಾಗದಿದ್ದರೆ ಹೇಗೆ? ಅಂತಹ ಖಾಸಗಿತನದ ಸಂಪೂರ್ಣ ಉಲ್ಲಂಘನೆಯನ್ನು ನಾನು ಒಪ್ಪುವುದಿಲ್ಲ. ದಯವಿಟ್ಟು ಜನರ ಗೌಪ್ಯತೆಯನ್ನು ಗೌರವಿಸಿ ಮತ್ತು ಅವರನ್ನು ಮನರಂಜನೆ ಎಂದು ಪರಿಗಣಿಸಬೇಡಿ” ಎಂದಿದ್ದರು. ಇದೀಗ ಅನುಷ್ಕಾ ಶರ್ಮಾ ಕೂಡ ವಿಡಿಯೋ ಕುರಿತಾಗಿ ಗರಂ ಆಗಿದ್ದಾರೆ.
ಅಭಿಮಾನಿಗಳು ಸಹಾನುಭೂತಿ ತೋರದ ಅನೇಕ ಘಟನೆಗಳನ್ನು ಹಿಂದೆಯೂ ಅನುಭವಿಸಿದ್ದೇನೆ. ಆದರೆ ಇದು ಅತ್ಯಂತ ಕೆಟ್ಟ ಬೆಳವಣಿಗೆ, ಇದು ಸಾಕಷ್ಟು ಅವಮಾನಕರವಾಗಿದೆ. ನಿಮ್ಮನ್ನು ನಿಯಂತ್ರಿಸಿಕೊಳ್ಳುವುದು ಎಲ್ಲರಿಗೂ ಸಹಾಯ ಮಾಡಬಹುದು. ನಿಮ್ಮ ಬೆಡ್ ರೂಮಿನಲ್ಲೇ ಇದೆಲ್ಲಾ ನಡೆದರೆ?” ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
