• January 2, 2026

ದೀಪಿಕಾ, ರಣವೀರ್ ದಾಂಪತ್ಯದಲ್ಲಿ ಬಿರುಕು: ಬಿರುಗಾಳಿ ಎಬ್ಬಿಸಿದ ಉಮೈರ್ ಟ್ವೀಟ್

ಕಳೆದ ಕೆಲ ದಿನಗಳ ಹಿಂದಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ನಟಿ ದೀಪಿಕಾ ಪಡುಕೋಣೆ ಇದೀಗ ಚೇತರಿಸಿಕೊಳ್ತಿದ್ದಾರೆ.ಸಿನಿಮಾಗಳ ಶೂಟಿಂಗ್ ನಿಂದ ಬಿಡುವು ಪಡೆದುಕೊಂಡು ಮನೆಯಲ್ಲಿ ದೀಪಿಕಾ ಪಡುಕೋಣೆ ವಿಶ್ರಾಂತಿ ಪಡೆದುಕೊಳ್ತಿದ್ದಾರೆ. ಈ ಮಧ್ಯೆ ದೀಪಿಕಾ ಹಾಗೂ ರಣವೀರ್ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದೆ. ಇದಕ್ಕೆಲ್ಲ ಕಾರಣ ಅದೊಂದು ಟ್ವೀಟ್. ಬಾಜಿರಾವ್ ಮಸ್ತಾನಿ, ರಾಮ್ ಲೀಲಾ, ಪದ್ಮಾವತ್ ನಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್. ಬಳಿಕ ಈ ಜೋಡಿಗಳು ರಿಯಲ್ ಲೈಫ್ ನಲ್ಲೂ ಒಂದಾಗಿ ಬೆಸ್ಟ್ ಪೇರ್ ಎನಿಸಿಕೊಂಡಿದ್ದಾರೆ. ಹೋದಲ್ಲಿ ಬಂದಲ್ಲೆಲ್ಲಾ ಕೈಕೈ ಹಿಡಿದು, ಸದಾ ಪತ್ನಿಗೆ ನೆರಳಾಗಿ ನಿಲ್ಲುತ್ತಿದ್ದ ಜೋಡಿಗಳ ಮಧ್ಯೆ ಬಿರುಕು ಉಂಟಾಗಿದೆ ಎನ್ನಲಾಗುತ್ತಿದೆ. 2018ರ ನವೆಂಬರ್ 14ರಂದು ಹಸೆಮಣೆ ಏರಿದ್ದ ದೀಪಿಕಾ ಹಾಗೂ ರಣವೀರ್ ಮಧ್ಯೆ ನಾಲ್ಕೇ ವರ್ಷಕ್ಕೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗುತ್ತಿದೆ. ಇದಕ್ಕೆಲ್ಲಾ ಕಾರಣ ವಿದೇಶಿ ಸೆನ್ಸಾರ್ ಮಂಡಳಿಯಲ್ಲಿ ಸದಸ್ಯ ಮತ್ತು ಸಿನಿಮಾ ವಿಮರ್ಶಕ ಉಮೈರ್ ಸಂಧು ಮಾಡಿರುವ ಟ್ವೀಟ್. ಉಮೈರ್ ಸಂಧು ಮಾಡಿರುವ ಟ್ವೀಟ್ ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ರಣ್‌ವೀರ್ ಮತ್ತು ದೀಪಿಕಾ ನಡುವೆ ಎಲ್ಲವೂ ಸರಿಯಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಉಮೈರ್ ಸಂಧು ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದ್ದಾರೆ. ಆದರೆ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದಲ್ಲಿ ಮಾತನಾಡಿದ ರಣವೀರ್ ನಾವು ಖುಷಿಯಾಗಿದ್ದೇವೆ. 2012ರಲ್ಲಿ ಶುರುವಾದ ಡೇಟಿಂಗ್ 2022ಕ್ಕೆ 10 ವರ್ಷವಾಗಿದೆ ಎಂದಿದ್ದರು. ಇದೀಗ ಉಮೈರ್ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದ್ದು ಯಾವುದು ಸರಿ? ಯಾವುದು ಸುಳ್ಳು ಎಂಬ ಸಂಶಯ ಮೂಡುವಂತೆ ಮಾಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now