• January 1, 2026

ಕಜ್ಬ ಚಿತ್ರವನ್ನು ಭಾರೀ ಮೊತ್ತಕ್ಕೆ ಖರೀದಿಸಿದ ಅಮೆಜಾನ್

ಆರ್ ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಸಾಕಷ್ಟು ಕುತೂಹಲ ಕ್ರಿಯೇಟ್ ಮಾಡಿದೆ. ಈಗಾಗ್ಲೆ ಫಸ್ಟ್ ಲುಕ್ ಹಾಗೂ ಟೀಸರ್ ಮೂಲಕ ಗಮನ ಸೆಳೆದಿರುವ ಕಬ್ಜ ಸಿನಿಮಾ ಟೀಂನಿಂದ ಮತ್ತೋಂದು ಖುಷಿಯ ವಿಚಾರ ಕೇಳಿ ಬಂದಿದೆ. ಕೆಜಿಎಫ್ ಸಿನಿಮಾದ ಬಳಿಕ ಕನ್ನಡದ ಮತ್ತೊಂದು ಬಿಗ್ ಬಜೆಟ್ ಸಿನಿಮಾ ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಬಹುನಿರೀಕ್ಷಿತ ಕಬ್ಜ ಸಿನಿಮಾವನ್ನು ನೂರಾರು ಕೋಟಿ ಕೊಟ್ಟು ಅಮೆಜಾನ್ ಪ್ರೈಮ್ ಖರೀದಿಸಿದ್ದು, ಮೂಲಗಳ ಪ್ರಕಾರ ಕೆಜಿಎಫ್ 2 ಸಿನಿಮಾವನ್ನು ಖರೀದಿಸಿದಷ್ಟೇ ಈ ಸಿನಿಮಾವನ್ನೂ ಕೊಂಡುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಅಮೆಜಾನ್ ಪ್ರೈಮ್ ನಲ್ಲಿ ಭಾರತೀಯ ಸಿನಿಮಾ ರಂಗದಲ್ಲೇ ಅತೀ ಹೆಚ್ಚು ಹಣಕೊಟ್ಟು ಖರೀದಿಸಿದ ಸಿನಿಮಾ ಕೆಜಿಎಫ್ 2 ಎಂದು ಹೆಸರುವಾಸಿಯಾಗಿತ್ತು. ಇದೀಗ ಕಬ್ಜ ಕೂಡ ಅದೇ ಸಾಲಿಗೆ ಸೇರಿದ್ದು ಕೆಜಿಎಫ್ 2 ಸಿನಿಮಾಗೆ ನೀಡಿದಷ್ಟೇ ಹಣವನ್ನು ಕಬ್ಜ ಸಿನಿಮಾಗೂ ನೀಡಲಾಗಿದೆ. ಅಂದ ಹಾಗೆ ಕಬ್ಜ ಸಿನಿಮಾ ಈ ಮಟ್ಟಕ್ಕೇ ಸೇಲ್ ಆಗಲು ಕಾರಣ ಸ್ಟಾರ್ ಕಲಾವಿದರ ದಂಡು, ಅದ್ದೂರಿ ಮೇಕಿಂಗ್ ಹಾಗೂ ಸಿನಿಮಾದ ಮೇಲಿರುವ ನಿರೀಕ್ಷೆ ಎನ್ನಲಾಗುತ್ತಿದೆ. ಈ ಹಿಂದೆ ಕಬ್ಜ ಸಿನಿಮಾ ರಿಲೀಸ್ ಗೂ ಮುನ್ನವೇ ಕೆಲವೊಂದು ಓಟಿಟಿ ಸಂಸ್ಥೆಗಳು ನಿರ್ದೇಶಕರನ್ನು ಸಂಪರ್ಕಿಸಿದ್ದರು. ಆದರೆ ಅಂದು ಹೇಳಿದ ಮೊತ್ತಕ್ಕೂ ಇದೀಗ ಫಿಕ್ಸ್ ಆಗಿರುವ ಮೊತ್ತಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಟೀಸರ್ ರಿಲೀಸ್ ಆದ ಬಳಿಕ ನಿರೀಕ್ಷೆ ಮತ್ತಷ್ಟು ಹೆಚ್ಚಿದ್ದು ಇದೀಗ ಮೊದಲು ಮಾತನಾಡಿದ್ದಕ್ಕಿಂತಲೂ ಭಾರಿ ಮೊತ್ತಕ್ಕೆ ಕಬ್ಜ ಸಿನಿಮಾವನ್ನು ಅಮೇಜಾನ್ ಪ್ರೈಮ್ ಖರೀದಿಸಿದೆ. ಉಪೇಂದ್ರ ಹಾಗೂ ಸುದೀಪ್ ನಟನೆಯ ಕಬ್ಜ ಸಿನಿಮಾವನ್ನು ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾಗೆ ಹೋಲಿಕೆ ಮಾಡಲಾಗುತ್ತಿದೆ. ಈಗಾಗ್ಲೆ ಅದ್ದೂರಿ ಮೇಕಿಂಗ್, ಸ್ಟಾರ್ ಕರ್ಸ್ ನಿಂದ ಗಮನ ಸೆಳೆದ ಕಬ್ಜ ಸಿನಿಮಾ ಇದೀಗ ಖರೀದಿಯ ವಿಚಾರದಲ್ಲೂ ಸದ್ದು ಮಾಡುತ್ತಿದೆ. ಕಬ್ಜ ಸಿನಿಮಾಗೆ ದೇಶ ವಿದೇಶದಲ್ಲು ಸಾಕಷ್ಟು ಭೇಡಿಕೆ ಇದ್ದು ಇದೇ ಕಾರಣಕ್ಕೆ ಈ ಸಿನಿಮಾ ಒಟ್ಟು 9 ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now