ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
10ಕೋಟಿ ಆಫರ್ ರಿಜೆಕ್ಟ್ ಮಾಡಿದ ನಟ ಅಲ್ಲು ಅರ್ಜುನ್
ಕೈತುಂಬಾ ಹಣ ಬರುತ್ತೆ ಅಂದರೆ ಸೆಲೆಬ್ರಿಟಿಗಳು ಜಾಹಿರಾತುಗಳಲ್ಲಿ ನಟಿಸಲು ಹಿಂದೆ ಮುಂದೆ ನೋಡಲ್ಲ. ಆದರೆ ಅಲ್ಲು ಅರ್ಜುನ್ 10 ಕೋಟಿ ರೂಪಾಯಿ ಆಫರ್ ನ ನಿರಾಯಾಸವಾಗಿ ನಿರಾಕರಿಸಿದ್ದಾರೆ.
ಸದ್ಯ ಅಲ್ಲು ಅರ್ಜುನ್ ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳಿಗೆ 7.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹೀಗಿರುವಾಗಲೇ, ಅಲ್ಲು ಅರ್ಜುನ್ ಅವರಿಗೆ ಗುಟ್ಕಾ ಮತ್ತು ಲಿಕ್ಕರ್ ಬ್ರ್ಯಾಂಡ್ ಪ್ರಮೋಷನ್‌ಗಾಗಿ 10 ಕೋಟಿ ರೂಪಾಯಿ ಆಫರ್ ಮಾಡಲಾಗಿದೆ.
ಆರೋಗ್ಯಕ್ಕೆ ಹಾನಿಯುಂಟು ಮಾಡುವ ಗುಟ್ಕಾ ಹಾಗೂ ಲಿಕ್ಕರ್ ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡುವುದು ಅಲ್ಲು ಅರ್ಜುನ್ ಅವರಿಗೆ ಇಷ್ಟವಿಲ್ಲ. ಹೀಗಾಗಿ, ಈ ಆಫರ್‌ಅನ್ನ ಅಲ್ಲು ಅರ್ಜುನ್ ತಿರಸ್ಕರಿಸಿದ್ದಾರೆ.
ಪಾನ್ ಮಸಾಲಾ ಬ್ರ್ಯಾಂಡ್ ಪ್ರಮೋಟ್ ಮಾಡುವ ಆಫರ್ ಕೂಡ ಅಲ್ಲು ಅರ್ಜುನ್ ಅವರಿಗೆ ಬಂದಿತ್ತು. ಆದರೆ, ಅದನ್ನೂ ಅಲ್ಲು ಅರ್ಜುನ್ ತಿರಸ್ಕರಿಸಿದ್ದರು. ಜನರ ಆರೋಗ್ಯ ಮುಖ್ಯ ಅನ್ನೋದು ಅಲ್ಲು ಅರ್ಜುನ್ ಅವರ ಉದ್ದೇಶವಾಗಿತ್ತು.
