• January 2, 2026

ಅಗತ್ಯ ಬಿದ್ದರೆ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತೇನೆ: ಅಲ್ಲು ಅರ್ಜುನ್

ನಟ, ನಟಿಯರ ಸಿನಿಮಾಗಳು ಹಿಟ್ ಆದ ಬಳಿಕ ಪರಭಾಷೆಗೆ ಹೋಗೋದು ಕಾಮನ್ ಅನ್ನೋ ಹಾಗಾಗಿದೆ. ಮಾತೃ ಭಾಷೆಯ ಸಿನಿಮಾ ಬಿಟ್ಟು ಪರಭಾಷೆಯಲ್ಲಿ ಮಿಂಚುವುದೇ ತಮ್ಮ ಗುರಿ ಎಂದುಕೊಂಡಿರ್ತಾರೆ. ಅದರಲ್ಲೂ ಬಿಟೌನ್ ಗೆ ಹೋಗೋದು ಅಂದ್ರೆನೇ ಪ್ರೆಸ್ಟೀಜ್ ಅನ್ನೋ ಮಂದಿ ಸಾಕಷ್ಟು ಇದ್ದಾರೆ. ಈ ಮಧ್ಯೆ ನಟ ಅಲ್ಲು ಅರ್ಜುನ್ ಹೇಳಿದ ಹೇಳಿಕೆಯೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದ್ದ ಪುಷ್ಪ ಸಿನಿಮಾ ಹಿಂದಿಯಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾದ ಮೂಲಕ ಅಲ್ಲು ಅರ್ಜನ್ ಬಾಲಿವುಡ್ ನಲ್ಲೂ ಖ್ಯಾತಿ ಘಳಿಸಿದ್ದಾರೆ. ಇದೇ ಕಾರಣಕ್ಕೆ ಅಲ್ಲು ಅರ್ಜುನ್ ಬಾಲಿವುಡ್ ಗೆ ಎಂಟ್ರಿಕೊಡ್ತಾರಾ ಅನ್ನೋ ಪ್ರಶ್ನೆ ಎದುರಾಗಿದ್ದು, ಇದಕ್ಕೆ ಅಲ್ಲು ಅರ್ಜುನ್ ಉತ್ತರ ನೀಡಿದ್ದಾರೆ. ಸದ್ಯಕ್ಕಂತೂ ಹಿಂದಿಯಲ್ಲಿ ನಟಿಸೋದು ನನ್ನ ಕಂಫರ್ಟಬಲ್ ಜೋನ್ ನ ಹೊರಗಿರುವ ವಿಚಾರ. ಆದರೆ ಅಗತ್ಯ ಬಿದ್ದರೆ ಅಲ್ಲಿ ಹೋಗಿ ನಟಿಸುತ್ತೇನೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಈ ಮೂಲಕ ಸದ್ಯಕ್ಕೆ ಹಿಂದಿ ಸಿನಿಮಾ ರಂಗಕ್ಕೆ ಹೋಗೋದಿಲ್ಲ ಎಂಬುದನ್ನು ಅಲ್ಲು ಅರ್ಜುನ್ ಕನ್ಪಾರ್ಮ್ ಮಾಡಿದ್ದಾರೆ. ಇತ್ತೀಚೆಗೆ ನಟ ಮಹೇಶ್ ಬಾಬು ಬಿಟೌನ್ ಎಂಟ್ರಿ ಬಗ್ಗೆ ಮಾತನಾಡಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಬಾಲಿವುಡ್ ಗೆ ನನ್ನ ಭರಿಸುವ ಶಕ್ತ ಇಲ್ಲ. ಹೀಗಾಗಿ ನಾನು ಅಲ್ಲಿಗೆ ಹೋಗುವುದಿಲ್ಲ ಎಂದಿದ್ದರು. ಮಹೇಶ್ ಬಾಬು ಹೇಳಿಕೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ, ಚರ್ಚೆಗೂ ಗ್ರಾಸವಾಗಿತ್ತು. ಬಳಿಕ ಮಹೇಶ್ ಬಾಬು ಸ್ಪಷ್ಟನೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದರು.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now