ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನನ್ನ ಪರ್ಸನಲ್ ಲೈಫ್ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ
ಆಲಿಯಾ ಭಟ್ ತಾಯಿಯಾಗುತ್ತಿರುವ ವಿಷಯ ತಿಳಿಸ ಅಭಿಮಾನಿಗಳು ಸಕತ್ ಖುಷಿಯಾಗಿದ್ರು. ಕೆಲವರು ಈ ಜೋಡಿಗೆ ಶುಭ ಹಾರೈಸಿದ್ರೆ, ಮತ್ತೆ ಕೆಲವರು ಟ್ರೋಲ್ ಮಾಡಿದ್ರು. ಆಲಿಯಾ ನಿಜಕ್ಕೂ ಗರ್ಭಿಣಿಯಾ? ಎಂದು ಪ್ರಶ್ನಿಸಿದ್ರು.
ಇತ್ತೀಚೆಗೆ ಆಲಿಯಾ ಭಟ್ ಡಾರ್ಲಿಂಗ್ಸ್ ಸಿನಿಮಾದ ಪ್ರಮೋಷನಲ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಲಿಯಾ ನಿಜಕ್ಕೂ ಗರ್ಭಿಣಿಯಾ? ಆಲಿಯಾ ಪ್ರಚಾರ ಪಡೆಯಲೆಂದು ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದರು. ಇದನ್ನೆಲ್ಲಾ ಗಮನಿಸಿದ ಆಲಿಯಾ ಭಟ್ ಫುಲ್ ಗರಂ ಆಗಿದ್ದಾರೆ.
ವೃತ್ತಿ ಮತ್ತು ವೈಯಕ್ತಿಕ ಜೀವನ ಬೇರೆ ಬೇರೆ. ಒಂದಕ್ಕೊಂದನ್ನು ಯಾವುದೇ ಕಾರಣಕ್ಕೂ ಹೋಲಿಸಬೇಡಿ. ನಾನು ಎರಡನ್ನೂ ಪ್ರೀತಿಸುವವಳು ಎಂದು ಹೇಳಿದ್ದಾರೆ. ಅಲ್ಲದೇ, ಮತ್ತಷ್ಟು ದಿನ ಚಿತ್ರೀಕರಣದಲ್ಲಿ ಭಾಗಿ ಆಗುತ್ತೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡಲು ಯಾರಿಗೂ ಹಕ್ಕಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
