• February 10, 2026

ಆಲಿಯಾ ಭಟ್ ಬೇಬಿ ಬಂಪ್ ಫೋಟೋ ಲೀಕ್

ಬಾಲಿವುಡ್ ನಟಿ ಆಲಿಯಾ ಭಟ್ ಇದ್ದಕ್ಕಿದ್ದ ಹಾಗೆ ತಾಯಿಯಾಗುತ್ತಿರುವ ವಿಷಯ ಹೇಳಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ರಣಬೀರ್ ಕಫೂರ್ ರನ್ನ ಮದುವೆಯಾದ ಎರಡೂವರೆ ತಿಂಗಳಲ್ಲಿ ಜೋಡಿಗಳು ಗುಡ್ ನ್ಯೂಸ್ ನೀಡಿದ್ದು ಇದೀಗ ಆಲಿಯಾ ಭಟ್ ಬೇಬಿ ಬಂಪ್ ಫೋಟೋಗಳು ವೈರಲ್ ಆಗುತ್ತಿದೆ.
ತಾಯಿಯಾದ ಬಳಿಕ ಆಲಿಯಾ ಸಿನಿಮಾದಲ್ಲಿ ನಟಿಸೋದು ಕಷ್ಟ. ಹೀಗಾಗಿ ಅದಾಗಲೇ ಶೂಟಿಂಗ್ ಆರಂಭವಾಗಿರೋ ಸಿನಿಮಾಗಳ ಕಥೆ ಏನು ಎಂಬ ಮಾತುಗಳು ಹರಿದಾಡಿತ್ತು. ಈ ವದಂತಿಗಳ ಬೆನ್ನಲ್ಲೇ ವಿದೇಶಕ್ಕೆ ತೆರಳಿರುವ ನಟಿ ಆಲಿಯಾ ಭಟ್ ಹಾಲಿವುಡ್ ಸಿನಿಮಾವೊಂದರ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಹಾಲಿವುಡ್ ನ ಹಾರ್ಟ್ ಆಫ್ ಸ್ಟೋನ್ ಸಿನಿಮಾದಲ್ಲಿ ನಟಿ ಆಲಿಯಾ ಭಟ್ ಹಾಗೂ ಹಾಲಿವುಡ್ ನಟಿ ಗಾಲ್ ಗ್ಯಾಡೋಟ್ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ. ಇದೀಗ ಈ ಸಿನಿಮಾದ ಶೂಟಿಂಗ್ ಅನ್ನು ಆಲಿಯಾ ಕಂಪ್ಲೀಟ್ ಮಾಡಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಅಲಿಯಾ ಭಟ್ ಬೇಬಿ ಬಂಪ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now