• February 10, 2026

ಕೊನೆಗೂ ರಾಜಕೀಯ ಎಂಟ್ರಿ ಬಗ್ಗೆ ತುಟಿ ಬಿಚ್ಚಿದ ನಟ ಅಕ್ಷಯ್ ಕುಮಾರ್

ಬಿಟೌನ್ ಕಿಲಾಡಿ ನಟ ಅಕ್ಷಯ್ ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಅಕ್ಕಿ ಕೈಯಲ್ಲಿ ನಾಲ್ಕೈದು ಸಿನಿಮಾಗಳಿವೆ. ಈ ಮಧ್ಯೆ ಅಕ್ಷಯ್ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗುತ್ತಿದೆ. ಈ ಎಲ್ಲಾ ಸುದ್ದಿಗೂ ನಟ ಅಕ್ಷಯ್ ಸ್ಪಷ್ಟನೆ ನೀಡಿದ್ದಾರೆ.   ಇತ್ತೀಚೆಗಷ್ಟೇ ಅಕ್ಷಯ್ ನಟನೆಯ ಮುಂದಿನ ಚಿತ್ರ `ರಕ್ಷಾ ಬಂಧನ’ ಪ್ರಚಾರದ ವೇಳೆ ವರದಿಗಾರನೊಬ್ಬ ರಾಜಕೀಯ ಎಂಟ್ರಿಯ ಕುರಿತು ಪ್ರಶ್ನೇ ಕೇಳಿದ್ದಾರೆ. ಆಗ ನಿರ್ಮಾಪಕರಾಗಿ ವರ್ಷಕ್ಕೆ ಮೂರು ಸಿನಿಮಾ ಮಾಡ್ತೀನಿ, ನನ್ನ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ಸಮಾಜಿಕವಾಗಿಯೂ ಮೆಸೇಜ್ ಕೊಡ್ತೀನಿ. ನನ್ನ ಸಿನಿಮಾಗಳ ಮೂಲಕ ನಾನು ಖುಷಿಯಾಗಿದ್ದೇನೆ. ಆದರೆ ರಾಜಕೀಯಕ್ಕೆ ಮಾತ್ರ ಬರೋದಿಲ್ಲ ಅಂತಾ ಅಕ್ಷಯ್ ಉತ್ತರಿಸಿದ್ದಾರೆ. ಅಕ್ಷಯ್ ನಿಲುವಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now