• January 1, 2026

ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ ‘ಆಕಾಶದೀಪ’ ನಟಿ ದಿವ್ಯಾ ಶ್ರೀಧರ್

ಕಳೆದ ಕೆಲ ದಿನಗಳ ಹಿಂದಷ್ಟೇ ಸಹ ನಟನ ಜೊತೆ ಹಸೆಮಣೆ ಏರಿದ್ದ ಆಕಾಶ ದೀಪ ಧಾರವಾಹಿಯ ನಟಿ ದಿವ್ಯಾ ಶ್ರೀಧರ್ ಇದೀಗ ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮದುವೆಯಾದ ಎರಡೇ ಎರಡು ತಿಂಗಳೊಳಗೆ ದಿವ್ಯಾ ಶ್ರೀಧರ್ ಪತಿ ಅಮ್ಜದ್ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ಆಕಾಶ ದೀಪ ಧಾರವಾಹಿಯಲ್ಲಿ ನಟಿಸಿದ್ದ ದಿವ್ಯಾ ಹಾಗೂ ಅಮ್ಜದ್ ಸುಮಾರು 5 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು. ಇತ್ತೀಚೆಗಷ್ಟೇ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದ ಜೋಡಿಗಳು ಇದೀಗ ಮೊದಲು ಮಗುವಿನ ನಿರೀಕ್ಷೆಯಲ್ಲಿದ್ದಾರೆ, ಅಲ್ಲದೆ ಇತ್ತೀಚೆಗೆ ಚೆನ್ನೈನಲ್ಲಿ ಹೊಸ ಮನೆಯ ಗೃಹ ಪ್ರವೇಶ ಕೂಡ ಮಾಡಿದ್ದಾರೆ. ಎಲ್ಲವೂ ಸರಿಯಾಗಿದೆ ಎನ್ನುವಾಗಲೆ ಇದೀಗ ದಿವ್ಯಾ ಪತಿಯ ವಿರುದ್ಧವೆ ಗಂಭೀರ ಆರೋಪ ಮಾಡಿದ್ದಾರೆ. “ಕೆಳದಿ ಕನ್ಮಣಿ ಧಾರಾವಾಹಿ ಮೂಲಕ ನಮ್ಮ ಸುಂದರವಾದ ಜರ್ನಿ ಶುರುವಾಯ್ತು. ಅಂದಿನಿಂದ ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಲು ಆರಂಭಿಸಿದೆವು. ಆಮೇಲೆ ನಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಬೇಕು ಎಂದು ನಾವಿಬ್ಬರೂ ಜೀವನವನ್ನು ಹಂಚಿಕೊಳ್ಳೋಣ ಎಂದು ನಿರ್ಧಾರ ಮಾಡಿದೆವು. ತುಂಬ ಪ್ರೀತಿ, ಸಹಕಾರ, ಜಗಳ, ವಾದ ವಿವಾದದ ಜೊತೆಗೆ 5 ವರ್ಷಗಳ ಕಾಲ ಒಟ್ಟಿಗಿದ್ದೆವು. ಇಬ್ಬರದೂ ಬೇರೆ ಬೇರೆ ಸಂಪ್ರದಾಯ. ನಾವಿಬ್ಬರೂ ಅದೃಷ್ಟವಂತ ಜೋಡಿಗಳು ಎಂದು ಭಾವಿಸುವೆ. ನಮ್ಮ ಕನಸಿನ ಮನೆಗೆ ಕಾಲಿಟ್ಟಿದ್ದು ದೊಡ್ಡ ಸಾಧನೆ ಎಂದುಕೊಳ್ಳುವೆ. ಮೊದಲ ಮಗುವಿನ ನಿರೀಕ್ಷೆಯೊಂದಿಗೆ ನಾವೀಗ ಜವಾಬ್ದಾರಿಯುತ ಸ್ಥಾನಕ್ಕೆ ಬಡ್ತಿ ಪಡೆಯುತ್ತಿದ್ದೇವೆ. ಪ್ರೇಮಿಗಳು, ಸತಿ-ಪತಿ, ಈಗ ಪಾಲಕರಾಗಿ ಜೀವನವನ್ನು ಆನಂದಿಸುತ್ತೇವೆ. ಎಲ್ಲರಿಗೂ ಧನ್ಯವಾದಗಳು” ಎಂದು ಇತ್ತೀಚೆಗಷ್ಟೇ ದಿವ್ಯಾ ಶ್ರೀಧರ್ ಬರೆದುಕೊಂಡಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now