• January 1, 2026

ಕಾಂತಾರ ಸಿನಿಮಾದ ವರಹ ರೂಪಂ ಟ್ಯೂನ್ ಕದ್ದಿದ್ದಾ? ಸ್ಪಷ್ಟನೆ ನೀಡಿದ ಅಜನೀಶ್ ಲೋಕನಾಥ್

ಸದ್ಯ ಎಲ್ಲಿ ನೋಡಿದ್ರು ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ್ದೇ ಸದ್ದು. ಸಿನಿಮಾ ರಿಲೀಸ್ ಆಗಿ ಎರಡು ವಾರ ಕಳೆದಿದ್ರು ಎಲ್ಲೆಲ್ಲೂ ಭರ್ಜರಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಈ ಮಧ್ಯೆ ಕಾಂತಾರ ಚಿತ್ರವನ್ನು ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲು ಸಿದ್ದತೆ ನಡೆಯುತ್ತಿದೆ. ಕಾಂತಾರ ಸಿನಿಮಾವನ್ನು ಕರಾವಳಿ ದೈವ ಕೋಲದ ಕುರಿತಾಗಿ ಚಿತ್ರಿಸಲಾಗಿದ್ರು ದೇಶ, ವಿದೇಶದ ಅಭಿಮಾನಿಗಳು ಕಾಂತಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈಗಾಗ್ಲೆ ಹಿಂದಿಗೆ ಡಬ್ ಮಾಡಿ ಟ್ರೈಲರ್ ಬಿಡುಗಡೆ ಆಗಿದ್ದು ಸದ್ಯದಲ್ಲೇ ಹಿಂದಿಯಲ್ಲೂ ಸಿನಿಮಾ ತೆರೆಗೆ ಬರಲಿದೆ. ಈ ಮಧ್ಯೆ ಕಾಂತಾರ ಸಿನಿಮಾದ ಮೇಲೆ ಅಪವಾದವೊಂದು ಕೇಳಿ ಬಂದಿದೆ. ಜೊತೆಗೆ ಸಾಕ್ಷಿಯನ್ನು ಮುಂದಿಟ್ಟಿದ್ದಾರೆ. ಕಾಂತಾರ ಸಿನಿಮಾದ ಹಾಡುಗಳಿಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅದರಲ್ಲೂ ವರಹ ರೂಪಂ ಹಾಡು ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಆದರೆ ಇದೀಗ ಈ ಹಾಡಿನ ಕುರಿತಾಗಿ ವಿವಾದವೊಂದು ಎದ್ದಿದೆ. ಕಳೆದ ಐದು ವರ್ಷಗಳ ಹಿಂದೆ ಮಲಯಾಳಂ ಭಾಷೆಯಲ್ಲಿ ನವರಸಂ ಅನ್ನೋ ಆಲ್ಬಮ್ ಹಾಡೊಂದನ್ನು ರಿಲೀಸ್ ಆಗಿದ್ದು. ಇದೀಗ ಕಾಂತಾರ ಸಿನಿಮಾಗೆ ಆ ಹಾಡನ್ನು ಯತಾವತ್ತಾಗಿ ಬಟ್ಟಿ ಇಳಿಸಲಾಗಿದೆ ಎನ್ನಲಾಗುತ್ತಿದೆ. ಕಾಂತಾರ ಚಿತ್ರದ ವರಹ ರೂಪಂ ಹಾಡಿಗೂ ಮಲಯಾಳಂನ ನವರಸಂ ಆಲ್ಬಮ್ ಗೂ ಸಾಕಷ್ಟು ಸಾಮ್ಯತೆ ಇದೆ. ಅಜನೀಶ್ ಲೋಕನಾಥ್ ಈ ಹಾಡನ್ನು ಕಾಫಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಅಜನೀಶ್ ಲೋಕನಾಥ್, “ವರಹ ರೂಪಂ ಹಾಗೂ ನವರಸಂ ಎರಡೂ ಹಾಡುಗಳ ಸಂಯೋಜನೆ ಬೇರೆ ಬೇರೆ. ಆ ರಾಕ್‌ಬ್ಯಾಂಡ್ ಸ್ಟೈಲ್‌ನಿಂದ ಇನ್‌ಸ್ಪೈರ್ ಆಗಿದ್ದೀವಿ. ಆದರೆ ಆದರೆ ನಮ್ಮ ಹಾಡಿನ ಸಂಯೋಜನೆಯೇ ಬೇರೆ. ಸ್ಟೈಲ್ ವಿಚಾರದಲ್ಲಿ ‘ವರಹ ರೂಪಂ’ ಸಾಂಗ್‌ ಕೇಳಿ ಇನ್‌ಸ್ಪೈರ್ ಆಗಿರೋದು ನಿಜ. ಅದು ಯಾವ ರೀತಿ ಅಂದರೆ ಬರೀ ಸ್ಟೈಲ್‌. ಅದು ಬಿಟ್ಟು ಅದಕ್ಕು ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now