• June 13, 2026

ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ  ಮಂಗಳೂರ ಹುಡುಗಿ ಅಯ್ಯೋ ಶ್ರದ್ಧಾ

ತನ್ನ ಪಟ ಪಟ ಮಾತಿನಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಮಂಗಳೂರು ಚೆಲುವೆ ಅಯ್ಯಯ್ಯೋ ಶ್ರದ್ಧಾ ಇದೀಗ ಸಿನಿಮಾ ರಂಗಕ್ಕೂ ಎಂಟ್ರಿಕೊಟ್ಟಿದ್ದಾರೆ.  ಬಾಲಿವುಡ್ ಸ್ಟಾರ್ ನಟನ ಜೊತೆ ಶ್ರದ್ಧಾಗೆ ನಟಿಸುವ ಚಾನ್ಸ್ ಸಿಕ್ಕಿದ್ದು ಡಾಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಬಾಲಿವುಡ್ ನಟ ಆಯುಷ್ಮಾನ್ ಖುರಾನ ಹಾಗೂ ರಾಕುಲ್ ಪ್ರೀತ್ ಸಿಂಗ್ ನಟನೆಯ ‘ಡಾಕ್ಟರ್ ಜಿ’ ಸಿನಿಮಾದಲ್ಲಿ ಅಯ್ಯೋ ಶ್ರದ್ಧಾ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಡಾಕ್ಟರ್ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದು ಈ ವಿಷಯವನ್ನು ಸ್ವತಃ ಶ್ರದ್ಧಾ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದುವರೆಗೂ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದ ಶ್ರದ್ಧಾ ಇದೀಗ ಸಿನಿಮಾ ರಂಗಕ್ಕೂ ಎಂಟ್ರಿಕೊಟ್ಟಿದ್ದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮಂಗಳೂರು ಚೆಲುವೆ ಶ್ರದ್ಧಾ ನಟನೆಯ ಕನ್ನಡಿಗರು ಮಾತ್ರವಲ್ಲ ಹೊರ ರಾಜ್ಯದ ಮಂದಿಯೂ ಫಿದಾ ಆಗಿದ್ದಾರೆ. ಇದೀಗ ಬಾಲಿವುಡ್ ಗೂ ಶ್ರದ್ಧಾ ಎಂಟ್ರಿಕೊಟ್ಟಿದ್ದು ಅಭಿಮಾನಿಗಳು ಶ್ರದ್ಧಾ ನಟನೆಯ ಸಿನಿಮಾ ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now