• January 1, 2026

ನಿರ್ದೇಶನದತ್ತ ನಟಿ ಶ್ರುತಿ ಹರಿಹರನ್ ಒಲವು: ನಟನೆಗೆ ಫುಲ್ ಸ್ಟಾಪ್ ಇಡ್ತಾರಾ ಲೂಸಿಯಾ ಬೆಡಗಿ

ಕಳೆದ ಕೆಲ ಸಮಯದಿಂದ ಸಿನಿಮಾ ರಂಗದಿಂದ ದೂರವಾಗಿದ್ದ ನಟಿ ಶ್ರುತಿ ಹರಿಹರನ್ ಮತ್ತೆ ಗಾಂಧಿನಗರಕ್ಕೆ ಎಂಟ್ರಿಕೊಟ್ಟಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರುತಿ ನಿರ್ದೇಶನದತ್ತ ಮುಖ ಮಾಡಲು ತೀರ್ಮಾನಿಸಿದ್ದಾರೆ. ಶ್ರುತಿ ತೀರ್ಮಾನ ಇದೀಗ ಅಭಿಮಾನಿಗಳ ಪ್ರಶ್ನೆಗೆ ಕಾರಣವಾಗಿದೆ. ಮಲಯಾಳಂ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿಕೊಟ್ಟ ಶ್ರುತಿ ಹರಿಹರನ್ ಗೆ ಖ್ಯಾತಿ ತಂದುಕೊಟ್ಟಿದ್ದು ಲೂಸಿಯಾ ಸಿನಿಮಾ. ಕನ್ನಡದ ಮೊದಲ ಸಿನಿಮಾದಲ್ಲೇ ಸದ್ದು ಮಾಡಿದ್ದು ಶ್ರುತಿ ಹರಿಹರನ್ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ಒಂದರ ಹಿಂದೊಂದರಂತೆ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಲೆ ಹೋದರು. ಕೆಲವೊಂದು ವಿವಾದದ ಬಳಿಕ ಸಿನಿಮಾ ರಂಗದಿಂದ ದೂರವಾಗಿ ಗಂಡ, ಮಗು ಅಂತಿದ್ದ ಶ್ರುತಿ ಹರಿಹರನ್ ಮತ್ತೆ ಗಾಂಧಿನಗರದಲ್ಲಿ ಆಕ್ಟೀವ್ ಆಗಿದ್ದಾರೆ. ಇತ್ತೀಚೆಗೆ ನೀಡಿದಲ್ಲಿ ಭಾಗಿಯಾಗಿ ಮಾತನಾಡಿದ ಶ್ರುತಿ ಹರಿಹರನ್ ನಿರ್ದೇಶನದ ಕನಸನ್ನು ಬಿಚ್ಚಿಟ್ಟಿದ್ದಾರೆ. ನಿರ್ದೇಶಕಿಯಾಗಿ ಹೊರಹೊಮ್ಮಬೇಕು ಎಂಬ ಆಸೆಯನ್ನ ಹೇಳಿಕೊಂಡಿದ್ದಾರೆ. ನಟಿಯಾಗಿ ಕೆಲಸ ನಿಲ್ಲಿಸಲು ಇಷ್ಟಪಡುವುದಿಲ್ಲ. ಆದರೆ ಅವಕಾಶಗಳು ಬಂದರೆ ಖಂಡಿತಾ ಬಿಡುವುದಿಲ್ಲ. ನಿರ್ದೇಶಕಿಯಾಗಿ ಕೆಲಸ ಮಾಡಬೇಕು ಎಂಬ ಇಷ್ಟವಿದೆ. ಇದರ ಮೊದಲ ಹೆಜ್ಜೆಯಾಗಿ ಒಂದು ಮ್ಯೂಸಿಕ್ ವೀಡಿಯೋ ನಿರ್ದೇಶಿಸಿ, ನಿರ್ಮಾಣ ಮಾಡಿದ್ದೇನೆ. ಶೀಘ್ರದಲ್ಲೇ ಈ ವೀಡಿಯೋ ರಿಲೀಸ್ ಆಗಲಿದೆ ಎಂದಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now