ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಾಲಿವುಡ್ ನ ಮತ್ತೊಂದು ಬಿಗ್ ಬಜೆಟ್ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಟನೆ
ಯೂ ಟರ್ನ್, ಆಪರೇಷನ್ ಅಲಮೇಲಮ್ಮ, ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ನಟಿ ಶ್ರದ್ಧಾ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಈಗಾಗ್ಲೆ ಹಿಂದಿಯ ಮಿಲನ ಟಾಕಿಸ್ ನಲ್ಲಿ ಬಣ್ಣ ಹಚ್ಚಿರುವ ಶ್ರದ್ಧ ಇದೀಗ ಮಿಲಿಂದ್ ಧೈಮಡೆ ನಿರ್ದೇಶನದ `ಲೆಟರ್ಸ್ ಟು ಮಿಸ್ಟರ್ ಖನ್ನಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ರಣ್‌ಬೀರ್ ಕಪೂರ್ ತಾಯಿ ನೀತು ಕಪೂರ್, ಸನ್ನಿ ಕೌಶಲ್ ಜೊತೆ ಶ್ರದ್ಧಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಚಿತ್ರೀಕರಣದ ವೇಳೆ ತೆಗೆದ ಫೋಟೋ ಸಖತ್ ವೈರಲ್ ಆಗಿದೆ.
ತಾಯಿ ಮತ್ತು ಮಗನ ಸಂಬಂಧದ ಕುರಿತಾದ `ಲೆಟರ್ಸ್ ಟು ಮಿಸ್ಟರ್ ಖನ್ನಾ’ ಚಿತ್ರದಲ್ಲಿ ನೀತು ಕಪೂರ್ ಜೊತೆ ಶ್ರದ್ಧಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೇ ಮೊದಲ ಭಾರಿಗೆ ಡಿಫರೆಂಟ್ ರೋಲ್‌ನಲ್ಲಿ ಶ್ರದ್ಧಾ ನಟಿಸುತ್ತಿದ್ದಾರೆ. ಚಿತ್ರಕ್ಕೆ ಲಯನ್ಸ್‌ಗೇಟ್ ಇಂಡಿಯಾ ಸ್ಟುಡಿಯೋ ಸಾಥ್ ನೀಡುತ್ತಿದೆ. ಸದ್ಯದಲ್ಲೇ ಚಿತ್ರದ ಕುರಿತು ಮತ್ತಷ್ಟು ಅಪ್ ಡೇಟ್ಸ್ ಸಿಗಲಿದೆ.
