• June 19, 2026

ರೂಪಾಂತರ ಸಿನಿಮಾದ ಮೂಲಕ ಸಂಗೀತಾ ಭಟ್ ಕಂಬ್ಯಾಕ್

ಸಾಕಷ್ಟು ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದ ನಟಿ ಸಂಗೀತಾ ಭಟ್ ಕೆಲ ಸಮಯದಿಂದ ಸಿನಿಮಾ ರಂಗದಿಂದ ದೂರವಾಗಿದ್ದರು. ಮೀಟು ಪ್ರಕರಣದಲ್ಲಿ ಧನಿ ಎತ್ತಿದ್ದ ಸಂಗೀತಾ ಭಟ್ ಆ ಬಳಿಕ ಸಿನಿಮಾ ರಂಗದಿಂದ ದೂರವಾಗಿ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. 2011ರಲ್ಲಿ ಡೂ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸಂಗೀತಾ ಭಟ್ ಬಳಿಕ ತೆಲುಗು ಸಿನಿಮಾದಲ್ಲೂ ಬಣ್ಣ ಹಚ್ಚಿದ್ದರು. ಆದರೆ ಸಂಗೀತಾ ಭಟ್ ಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದ ಸ್ಯಾಂಡಲ್ ವುಡ್ ಸಿನಿ ರಂಗ. ಎರಡನೇ ಸಲ, ಅನುಕ್ತ ಸಿನಿಮಾಗಳ ಮೂಲಕ ಸದ್ದು ಮಾಡಿದ್ದ ಸಂಗೀತಾ ಭಟ್ ಮತ್ತೆ ಗಾಂಧಿನಗರದಲ್ಲಿ ಸದ್ದು ಮಾಡೋಕೆ ರೆಡಿಯಾಗಿದ್ದಾರೆ. ರೂಪಾಂತರ ಟೈಟಲ್ ನ ಚಿತ್ರದಲ್ಲಿ ನಟ ಕಿಶೋರ್ ಜತೆ ಪ್ರಮುಖ ಪಾತ್ರದಲ್ಲಿ ಮಿಂಚೋಕೆ ಸಂಗೀತಾ ಭಟ್ ರೆಡಿಯಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂಗೀತಾ ಭಟ್ ಬರೆದುಕೊಂಡಿದ್ದಾರೆ. ರೂಪಾಂತರ ಫ್ಯಾಮಿಲಿ ಓರಿಯಂಟೆಡ್ ಥ್ರಿಲರ್, ಸಸ್ಪೆನ್ಸ್ ಕಥೆಯಾಗಿದ್ದು, ಪವರ್ ಫುಲ್ ಪಾತ್ರದ ಮೂಲಕ ಸಂಚಲನ ಮೂಡಿಸಿದ್ದಾರೆ. ವಿಭಿನ್ನ ಕಥೆಯ ಮೂಲಕ ಸಂಗೀತಾ ಭಟ್ ಮತ್ತೊಮ್ಮೆ ಸಿನಿ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now