• March 18, 2026

ದರ್ಶನ್ ಕ್ರಾಂತಿಗೆ ಹೊಸ ನಾಯಕಿಯ ಎಂಟ್ರಿ: ಕುತೂಹಲ ಮೂಡಿಸಿದ ವೈರಲ್ ಫೋಟೋ

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ಸಾಕಷ್ಟು ಕುತೂಹಲ ಕೆರಳಿಸಿದೆ. ವಿ.ಹರಿಕೃಷ್ಣ ನಿರ್ದೇಶದಲ್ಲಿ ತೆರೆಗೆ ಬರ್ತಿರೋ ಕ್ರಾಂತಿ ಒಂದೊಳ್ಳೆ ಕಾನ್ಸೆಪ್ಟ್ ನಲ್ಲಿ ರೆಡಿಯಾಗುತ್ತಿದ್ದು ಚಿತ್ರ ನೋಡೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಮಧ್ಯೆ ಚಿತ್ರತಂಡಕ್ಕೆ ಹೊಸ ನಾಯಕಿಯ ಎಂಟ್ರಿಯಾಗಿರೋದು ಕ್ರಾಂತಿ ಕುರಿತು ಮತ್ತಷ್ಟು ಕ್ಯೂರಿಯಾಸಿಟಿಗೆ ಕಾರಣವಾಗಿದೆ. ಕ್ರಾಂತಿ ಸಿನಿಮಾದಲ್ಲಿ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಹೇಳಲಾಗುತ್ತಿದೆ. ಶೈಲಾಜಾ ನಾಗ್ ಹಾಗೂ ಬಿ.ಸುರೇಶ್ ನಿರ್ಮಾಣದಲ್ಲಿ ಅದ್ದೂರಿಯಾಗಿ ಕ್ರಾಂತಿ ಸಿನಿಮಾ ಮೂಡಿ ಬರುತ್ತಿದ್ದು ಈಗಾಗ್ಲೆ ಚಿತ್ರದ ಪೋಸ್ಟರ್, ಟೀಸರ್ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಮುಂದಿನ ತಿಂಗಳು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸಿನಿಮಾವನ್ನ ರಿಲೀಸ್ ಮಾಡೋಕೆ ಚಿತ್ರತಂಡ ಮುಂದಾಗಿದೆ. ಈಗಾಗ್ಲೆ ದರ್ಶನ್ ಗೆ ಜೋಡಿಯಾಗುವ ಮೂಲಕ ನಟಿ ರಚಿತಾ ರಾಮ್ ಕ್ರಾಂತಿ ಚಿತ್ರತಂಡಕ್ಕೆ ಎಂಟ್ರಿಕೊಟ್ಟು ಆಲ್ ಮೋಸ್ಟ್ ಶೂಟಿಂಗ್ ಮುಗಿಸಿದ್ದಾರೆ. ಇದೀಗ ಚಿತ್ರತಂಡದಿಂದ ಮತ್ತೊಂದು ಫೋಟೋ ಲೀಕ್ ಆಗಿದೆ. ಅದರಲ್ಲಿ ದರ್ಶನ್, ರಚಿತಾ ರಾಮ್ ಹಾಗೂ ಸಂಯುಕ್ತ ಹೊರನಾಡು ಒಟ್ಟಿಗೆ ಕಾಣಿಸಿಕೊಂಡಿದ್ದು ಕುತೂಹಲ ಮೂಡಿಸಿದೆ. ಕ್ರಾಂತಿ ಸಿನಿಮಾದಲ್ಲಿ ನಟಿ ಸಂಯುಕ್ತ ಹೊರನಾಡು ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಚಿತ್ರತಂಡ ಮಾತ್ರ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಇವರುಗಳ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಘಟಾನುಘಟಿ ಕಲಾವಿದರು ‘ಕ್ರಾಂತಿ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now