• February 10, 2026

ನನ್ನ ಮಗಳು ನಟಿಯಾಗಬೇಕು ಎಂದರು ನಾನು ಆಕೆಯ ಜೊತೆ ಮಲಗುತ್ತೇನೆ ಎಂದಿದ್ದ ಆ ನಿರ್ಮಾಪಕ: ನಟಿ ರತನ್ ರಾಜಪೂತ್

ಕಾಸ್ಟಿಂಗ್ ಕೌಚ್ ಎನ್ನುವುದು ಎಲ್ಲಾ ಭಾಷೆಯಲ್ಲೂ ಇದ್ದೆ ಇದೆ. ಈ ಹಿಂದೆ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುತ್ತಿದ್ದ ನಟಿಯರು ಇದೀಗ ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಹಿ ಸತ್ಯಗಳನ್ನು ಅನೇಕ ನಟಿಯರು ಬಹಿರಂಗಗೊಳಿಸಿದ್ದಾರೆ. ಸದ್ಯ ನಟಿ ರತನ್​ ರಾಜಪೂತ್ ಕಾಸ್ಟಿಂಗ್ ಕೌಚ್ ಕುರಿತು ಕೆಲವು ಶಾಕಿಂಗ್ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ. ತಾನು ಸಿನಿಮಾ ರಂಗಕ್ಕೆ ಬಂದ ಸಂದರ್ಭದಲ್ಲಿ ನಿರ್ಮಾಪಕನೊಬ್ಬ ನಡೆದುಕೊಂಡ ರೀತಿ ಆಘಾತ ಉಂಟು ಮಾಡಿತ್ತು ಎಂದಿದ್ದಾರೆ. ಹಿಂದಿಯ ಕೆಲವೊಂದು ಧಾರವಾಹಿಗಳಲ್ಲಿ ನಟಿಸಿರುವ ರತನ್ ರಾಜಪೂತ್ ಹಿಂದಿ ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಸಿದ್ದರು. ಮೂಲತಃ ಬಿಹಾರದ ರತನ್ ರಾಜಪೂತ್ ತಮ್ಮದೇ ಯೂಟ್ಯೂಬ್ ಚಾನಲ್ ಕೂಡ ಹೊಂದಿದ್ದಾರೆ. ಸಿನಿಮಾದಲ್ಲಿ ನಟಿಸುವ ಆಸೆ ಹೊಂದಿದ್ದ ರತನ್ ಮುಂಬೈಗೆ ಬಂದ ಆರಂಭದಲ್ಲಿ ತಮಗಾದ ಕಹಿ ಅನುಭವವನ್ನು ಬಿಚ್ಚಿಟ್ಟಿದ್ದಾರೆ.  14 ವರ್ಷಗಳ ಹಿಂದೆ ಮುಂಬೈಗೆ ಬಂದಿದ್ದ ವೇಳೆ 60-65 ವರ್ಷ ವಯಸ್ಸಿನ ವ್ಯಕ್ತಿಯೊರ್ವ ನನಗೆ ಅವಮಾನ ಮಾಡಿದ್ದ. ‘ನಿನ್ನ​ ಕೂದಲು, ಚರ್ಮ ಹಾಗೂ ಬಟ್ಟೆ ಸರಿಯಿಲ್ಲ. ಅದನ್ನೆಲ್ಲ ಸರಿ ಮಾಡಿ ನಿನಗೆ ಬೇರೆ ಲುಕ್​ ನೀಡಲು 2ರಿಂದ ಎರಡೂವರೆ ಲಕ್ಷ ರೂಪಾಯಿ ಖರ್ಚು ಆಗುತ್ತದೆ. ಅಷ್ಟು ಹಣವನ್ನು ನಿನಗಾಗಿ ನಾನು ಏಕೆ ಖರ್ಚು ಮಾಡಲಿ? ಖರ್ಚು ಮಾಡಬೇಕು ಎಂಬುದಾದರೆ ನೀನು ನನ್ನನ್ನು ಗಾಡ್​ ಫಾದರ್​ ಮಾಡಿಕೊಳ್ಳಬೇಕು. ನನ್ನ ಜೊತೆ ಫ್ರೆಂಡ್​ ರೀತಿ ಇರಬೇಕು’ ಅಂತ ಆತ ಹೇಳಿದ್ದ ಎಂಬುದನ್ನು ರತನ್​ ಬಹಿರಂಗ ಪಡಿಸಿದ್ದಾರೆ. ‘ನೀವು ನನ್ನ ತಂದೆಯ ಸಮಾನರು. ನಿಮ್ಮನ್ನು ನಾನು ಗೌರವಿಸುತ್ತೇನೆ’ ಎಂದು ರತನ್ ಹೇಳಿದಕ್ಕೆ ಕೋಪದಿಂದ ಪ್ರತಿಕ್ರಿಯಿಸಿ ಆ ವ್ಯಕ್ತಿ, ‘ನನ್ನ ಮಗಳು ನಟಿಯಾದರೂ ಕೂಡ ನಾನು ಆಕೆಯ ಜೊತೆ ಮಲಗುತ್ತೇನೆ’ ಎಂದು ಆ ನೀಚ ನಿರ್ಮಾಪಕ ಹೇಳಿದ್ದ ಎಂದು ರತನ್​ ರಾಜಪೂತ್ ಹೇಳಿದ್ದಾರೆ. ` ಆತ ನನಗೆ ಏನು ಮಾಡಲಿಲ್ಲ. ಆದರೆ ಆತನ ಮಾತಿನಿಂದ ನನ್ನ ಮೇಲೆ ಕೆಟ್ಟ ಪರಿಣಾಮ ಬೀರಿತು. ಒಂದು ತಿಂಗಳ ಕಾಲ ನಾನು ಯಾರನ್ನು ಭೇಟಿ ಮಾಡಲಿಲ್ಲ ಎಂದು 14 ವರ್ಷಗಳ ಹಿಂದಿನ ಕಹಿ ಘಟನೆಯನ್ನು ರತನ್ ರಾಜಪೂತ್ ಹೇಳಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now