• December 22, 2025

ಕಾಂತಾರ ನೋಡಿಲ್ಲ ಎಂದು ರಶ್ಮಿಕಾ ಮಂದಣ್ಣ: ನಿಯತ್ತಿಲ್ಲದ ಹುಡುಗಿ ಎಂದು ನೆಟ್ಟಿಗರು

ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಬಿಡುಗಡೆ ಆಗಿ ತಿಂಗಳು ಕಳೆದಿದ್ರು ಸಾಕಷ್ಟು ಕಡೆಗಳಲ್ಲಿ ಇಂದಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಾಕಷ್ಟು ಮಂದಿ ಚಿತ್ರ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಇದೀಗ ರಶ್ಮಿಕಾ ಮಂದಣ್ಣ ಚಿತ್ರ ನೋಡಿಲ್ಲ ಎನ್ನುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾಂತಾರ ಚಿತ್ರ ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ರಿಷಬ್ ಶೆಟ್ಟಿಯನ್ನು ಕರೆದು ಸನ್ಮಾನಿಸಿದ್ದಾರೆ. ಅಲ್ಲದೆ ಕಂಗಾನ ರಣಾವತ್, ಪೂಜಾ ಹೆಗ್ಡೆ, ಅನುಷ್ಕಾ ಶೆಟ್ಟಿ, ಶಿಲ್ಪಾ ಶೆಟ್ಟಿ, ಪ್ರಭಾಸ್ ಸೇರಿದಂತೆ ಸಾಕಷ್ಟು ಮಂದಿ ಚಿತ್ರ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಆದರೆ ಇವರದ್ದೆ ಟೀಂನಲ್ಲಿದ್ದ ರಶ್ಮಿಕಾ ಮಾತ್ರ ಚಿತ್ರ ನೋಡಲ್ಲವಂತೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು ರಶ್ಮಿಕಾರನ್ನು ಕಾಂತಾರ ಚಿತ್ರ ವೀಕ್ಷಿಸಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಕಿರಿಕ್ ಬೆಡಗಿ, ನಾನಿನ್ನೂ ಸಿನಿಮಾ ನೋಡಿಲ್ಲ. ಆದರೆ ನೋಡುತ್ತೇನೆ. ಬೆಂಗಳೂರಿಗೆ ಹಿಂದಿರುಗಿದ ಮೇಲೆ ವೀಕ್ಷಿಸುತ್ತೇನೆ ಎಂದಿದ್ದಾರೆ. ರಶ್ಮಿಕಾ ಉತ್ತರಕ್ಕೆ ಕನ್ನಡಿಗರು ಕೆಂಡಾಮಂಡಲರಾಗಿದ್ದಾರೆ. ತಮ್ಮ ಮೊದಲ ಸಿನಿಮಾ ನಿರ್ದೇಶಿಸಿರುವ ನಿರ್ದೇಶಕನ ಸೂಪರ್ ಹಿಟ್ ಚಿತ್ರ ವೀಕ್ಷಿಸಿ ಚಿತ್ರ ಹೇಗಿದೆ ಎಂದು ಹೇಳುವ ನಿಯತ್ತೂ ಕೂಡ ಈಕೆಗಿಲ್ಲ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ. 2016ರಲ್ಲಿ ತೆರೆಗೆ ಬಂದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ರಾತ್ರೋ ರಾತ್ರಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು. ರಕ್ಷಿತ್ ಶೆಟ್ಟಿ ಹಾಗೂ ರಾಶ್ಮಿಕಾ ಕಾಂಬಿನೇಷನ್ ನಲ್ಲಿ ಬಂದ ಕಿರಿಕ್ ಪಾರ್ಟಿ ಚಿತ್ರವನ್ನು ರಿಷಬ್ ಶೆಟ್ಟಿ ನಿರ್ದೇಶನ ಮಾಡಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now