ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅಬುದಾಬಿಯಲ್ಲಿ ಮತ್ತಷ್ಟು ಹಾಟ್ ಆಗಿ ಮಿಂಚಿದ ರಶ್ಮಿಕಾ ಮಂದಣ್ಣ: ಕಿರಿಕ್ ಬ್ಯೂಟಿಯ ಸೌಂದರ್ಯಕ್ಕೆ ಫ್ಯಾನ್ಸ್ ಫೀದಾ
ನಟಿ ರಶ್ಮಿಕಾ ದಿನ ಕಳೆದಂತೆ ಮತ್ತಷ್ಟು ಹಾಟ್ ಹಾಟ್ ಆಗಿ ಕಾಣಿಸಿಕೊಳ್ತಿದ್ದಾರೆ. ಜಿಮ್ ನಲ್ಲಿ ನಿತ್ಯ ಬೆವರಿಳಿಸುವ ರಶ್ಮಿಕಾ ತಮ್ಮ ದೇಹದ ಬಗ್ಗೆ ಹೆಚ್ಚಾಗಿಯೇ ಕಾಳಜಿ ವಹಿಸುತ್ತಿದ್ದಾರೆ. ಇದೀಗ ರಶ್ಮಿಕಾ ಮತ್ತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದು ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಿದ್ದಾರೆ.
ಟಾಲಿವುಡ್ ಜೊತೆಗೆ ಬಾಲಿವುಡ್ ನ ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ನಟಿಸ್ತಿದ್ದಾರೆ. ಕೈತುಂಬಾ ಸಿನಿಮಾಗಳನ್ನು ಇಟ್ಟುಕೊಂಡು ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಆಗಾಗ ವಿಭಿನ್ನ ಲುಕ್ ನಲ್ಲಿ ಫೋಟೋಗೆ ಫೋಸ್ ನೀಡುತ್ತಿರುತ್ತಾರೆ. ಇದೀಗ ಅಬುದಾಬಿಯ ಸುಂದರ ತಾಣಗಳಲ್ಲಿ ಬೋಲ್ಡ್ ಆಗಿ ಫೋಟೋಗೆ ಫೋಸ್ ನೀಡಿದ್ದಾರೆ.
ಸದ್ಯ ರಶ್ಮಿಕಾ ನಟನೆಯ ಹಿಂದಿಯ ಗುಡ್ ಬೈ ಸಿನಿಮಾ ಬಿಡುಗಡೆ ಆಗಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಟೌನ್ ಗೆ ಎಂಟ್ರಿಕೊಟ್ಟ ಮೊದಲ ಸಿನಿಮಾದಲ್ಲೇ ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ ರಶ್ಮಿಕಾ ಇದೀಗ ಮತ್ತಷ್ಟು ಸ್ಟಾರ್ ನಟರ ಜೊತೆ ಬಣ್ಣ ಹಚ್ಚುತ್ತಿದ್ದಾರೆ.
ಇತ್ತೀಚೆಗೆ ರಶ್ಮಿಕಾ ವಿಜಯ್ ದೇವರಕೊಂಡ ಜೊತೆ ಮಾಲ್ಡೀವ್ಸ್ ಗೆ ಹೋಗಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡಿತ್ತು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಶ್ಮಿಕಾ ಮಾಲ್ಡೀವ್ಸ್ ನಲ್ಲಿ ಹಾಲಿಡೇ ಎಂಜಾಯ್ ಮಾಡಿಕೊಂಡು ವಾಪಸ್ ಆಗಿದ್ದಾರೆ.

