• December 21, 2025

ಲಹರಿ ವೇಲು ವಿರುದ್ಧ ಕಿಡಿ ಕಾರಿದ ನಟಿ ರಮ್ಯಾ

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಅನುಮತಿ ಇಲ್ಲದೆ ಕೆಜಿಎಫ್ 2 ಹಿಂದಿ ಚಿತ್ರದ ಸುಲ್ತಾನ ಹಾಡನ್ನು ಬಳಸಿದೆ ಎಂದು ಎಂಆರ್ ಟಿ ಮ್ಯೂಸಿಕ್ ಆರೋಪಿಸಿದೆ. ಎಂಆರ್‌ಟಿ ಸಂಗೀತ ಕಂಪನಿಯಿಂದ ನ್ಯಾಯಾಲಯಕ್ಕೆ ದಾವೆ ಹೂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಲಹರಿ ಮ್ಯೂಸಿಕ್ ಸಂಸ್ಥೆಯ ಲಹರಿ ವೇಲು ವಿರುದ್ಧ ಕಿಡಿಕಾರಿದ್ದಾರೆ. ಎಂ ಆರ್ ಟಿ ಮ್ಯೂಸಿಕ್ ಕೆಜಿಎಫ್ 2 ಹಿಂದಿ ಹಾಡುಗಳು ಹಕ್ಕುಸ್ವಾಮ್ಯ ಹೊಂದಿದೆ. ಆದರೆ ಎಂ ಆರ್ ಟಿ ಮ್ಯೂಸಿಕ್ ನಿಂದ ಯಾವುದೇ ಪರ್ಮಿಷನ್ ಪಡೆಯದೆ ಭಾರತ್ ಜೋಡೋ ಯಾತ್ರೆಯಲ್ಲಿ ಹಾಡನ್ನು ಬಳಸಲಾಗಿದೆ ಎಂದು ಎಂಆರ್ ಟಿ ಮ್ಯೂಸಿಕ್ ಕಂಪನಿ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಲಹರಿ ವೇಲು ವಿರುದ್ಧ ನಟಿ ರಮ್ಯಾ ಕಿಡಿ ಕಾರಿದ್ದಾರೆ. ಲಹರಿ ವೇಲು ಅವರಿಗೆ ಬಿಜೆಪಿ ಟಿಕೆಟ್‌ ಬೇಕಾಗಿರಬಹುದು. ಅದಕ್ಕಾಗಿ ಅವರು ಪ್ರಯತ್ನಿಸುತ್ತಿರಬಹುದು. ಆ ಕಾರಣಕ್ಕೆ ಈ ರೀತಿ ಮಾಡುತ್ತಿರುವುದು ಬೇಸರದ ಸಂಗತಿ ಎಂದು ರಮ್ಯಾ ಬರೆದುಕೊಂಡಿದ್ದಾರೆ. ಲಹರಿ ವೇಲು ಅವರು ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಗಾಗಿ ಪ್ರಯತ್ನ ನಡೆಸುತ್ತಿದ್ದಾರೆಯೇ?, ಕೆಜಿಎಫ್ ಹಾಡುಗಳನ್ನು ಎಲ್ಲರೂ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಅದಕ್ಕೆಲ್ಲ ಆಕ್ಷೇಪ ಎತ್ತದ ಲಹರಿ ವೇಲು ಅವರಿಗೆ ಕಾಂಗ್ರೆಸ್ ಬಳಸಿಕೊಂಡಾಗ ಮಾತ್ರ ಸಮಸ್ಯೆಯಾಗಿದೆಯೇ? ಎಂದು ಟ್ವೀಟ್ ಮೂಲಕ ಪ್ರಶ್ನಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now