• March 14, 2026

ನಟಿ ರಂಭಾ ಕಾರು ಭೀಕರ ಅಪಘಾತ : ಪುತ್ರಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ತೆಲುಗು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಖ್ಯಾತ ನಟಿ ರಂಭಾ ಕಾರು ಭೀಕರ ಅಪಘಾತಕ್ಕೆ ತುತ್ತಾಗಿದೆ. ಕೆನಡಾದ ಟೊರೊಂಟೊದಲ್ಲಿ ಘಟನೆ ನಡೆದ್ದು ಅಪಘಾತದಲ್ಲಿ ರಂಭಾ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಂಭೀರವಾಗಿ ಗಾಯಗೊಂಡಿರುವ ರಂಭಾ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಂಭಾ, ಪತಿ ಇಂದ್ರಕುಮಾರ್ ಪದ್ಮನಾಥನ್ ಹಾಗೂ ಮೂವರು ಮಕ್ಕಳೊಂದಿಗೆ ಕೆನಡಾದ ಒಂಟಾರಿಯೊ ಪ್ರಾಂತ್ಯದ ರಾಜಧಾನಿ ಟೊರೊಂಟೊದಲ್ಲಿ ವಾಸವಾಗಿದ್ದಾರೆ. ಟೊರೊಂಟೊದ ಶಾಲೆಯಲ್ಲಿ ರಂಭಾ ಮಕ್ಕಳು ಓದುತ್ತಿದ್ದು ನಿತ್ಯ ರಂಭಾ ಅವರೇ ಹೋಗಿ ಮಕ್ಕಳನ್ನು ಕರೆತರುತ್ತಿದ್ದರು. ಅದರಂತೆ ನಿನ್ನೆ ಕೂಡ ಮಕ್ಕಳನ್ನು ಮನೆಗೆ ವಾಪಸ್ ಕರೆ ತರುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದೆ. ರಂಭಾ ಚಲಾಯಿಸುತ್ತಿದ್ದ ಕಾರು ಬಲ ಬದಿಯಿಂದ ಬಂದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಅಪಘಾತದ ಕುರಿತು ರಂಭಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಮಾಡಿದ್ದು ಘಟನೆಯ ಕುರಿತು ಬರೆದುಕೊಂಡಿದ್ದಾರೆ. ಮಕ್ಕಳನ್ನು ಶಾಲೆಯಿಂದ ಕರೆತರುವಾಗ ಈ ಅಪಘಾತ ಸಂಭವಿಸಿದೆ. ಕಾರಿನ ಏರ್​ಬ್ಯಾಗ್ ತೆಗೆದುಕೊಂಡಿದ್ದರಿಂದ ದೊಡ್ಡ ಮಟ್ಟದ ತೊಂದರೆ ಉಂಟಾಗಿಲ್ಲ. ಕಾರು ಜಖಂಗೊಂಡಿದ್ದು, ಸಶಾಗೆ ಗಾಯಗಳಾಗಿವೆ. ‘ನಮ್ಮ ಕಾರಿಗೆ ಮತ್ತೊಂದು ಕಾರು ಬಂದು ಗುದ್ದಿದೆ. ಎಲ್ಲರೂ ಸೇಫ್ ಆಗಿದ್ದೇವೆ. ಸಶಾ ಆಸ್ಪತ್ರೆಯಲ್ಲೇ ಇದ್ದಾರೆ. ಬ್ಯಾಡ್ ಟೈಮ್​. ದಯವಿಟ್ಟು ಪ್ರಾರ್ಥಿಸಿ’ ಎಂದು ರಂಭಾ ಬರೆದುಕೊಂಡಿದ್ದಾರೆ. ರಂಭಾ ಚಲಾಯಿಸುತ್ತಿದ್ದ ಕಾರಿನಲ್ಲಿ ಇಬ್ಬರು ಮಕ್ಕಳು ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿರುವ ಕೆಲಸದಾಕೆ ಇದ್ದರು ಎಂದು ಹೇಳಲಾಗುತ್ತಿದ್ದು, ಕಿರಿಯ ಪುತ್ರಿ ಸಾಶಾಗೆ ತೀವ್ರ ಗಾಯಗಳಾಗಿದ್ದು, ಉಳಿದಂತೆ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕನ್ನಡ, ತಮಿಳು, ಹಿಂದಿ, ಮಲಯಾಳಂ, ಬೆಂಗಾಲಿ, ಬೋಜ್ ಪುರಿ ಹಾಗೂ ಇಂಗ್ಲೀಷ್ ಸೇರಿದಂತೆ ಒಟ್ಟು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ರಂಭ ಬಣ್ಣ ಹಚ್ಚಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now