ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಯುರೋಪ್ ನಲ್ಲಿ ರಾಕಿಂಗ್ ದಂಪತಿ ಮೋಜು, ಮಸ್ತಿ
ಯಶ್ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿರುವ ನಟಿ ರಾಧಿಕಾ ಪಂಡಿತ್ ಅವುಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಯುರೋಪ್ ನ ಸ್ಲೋವೆನಿಯಾದಲ್ಲಿ ಯಶ್ ದಂಪತಿಗಳು ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಸ್ಲೋವೆನಿಯಾದಲ್ಲಿರುವ ಲೇಕ್ ಬ್ಲೆಡ್ ಚರ್ಚ್ ಎದುರು ರಾಧಿಕಾ ಪಂಡಿತ್ ಹಾಗೂ ಯಶ್ ಫೋಟೋಗೆ ಫೋಸ್ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ರಾಧಿಕಾ ಪಂಡಿತ್ ಹಾಗೂ ಯಶ್ ನಟನೆಯ ಮೊಗ್ಗಿನ ಮನಸ್ಸು ಸಿನಿಮಾ ರಿಲೀಸ್ ಆಗಿ 14 ವರ್ಷ ಕಳೆದಿದೆ. ಈ ಸಿನಿಮಾದ ಮೂಲಕ ಜೋಡಿಯಾಗಿದ್ದ ಯಶ್ ಹಾಗೂ ರಾಧಿಕಾ ಬಳಿಕ ರಿಯಲ್ ಲೈಫ್ ನಲ್ಲೂ ಜೋಡಿಯಾದರು.
ಕೆಜಿಎಫ್ ಸಿನಿಮಾ ತೆರೆಕಂಡು ಮೂರು ತಿಂಗಳು ಕಳೆದಿದೆ. ಆದರೂ ಯಶ್ ತಮ್ಮ ಉದ್ದ ಕೂದಲು ಹಾಗೂ ಗಡ್ಡಕ್ಕೆ ಕತ್ತರಿ ಹಾಕಿಲ್ಲ. ಕೆಜಿಎಫ್ 3 ಸಿನಿಮಾ ಆರಂಭವಾಗಲಿದ್ದು ಇದೇ ಕಾರಣಕ್ಕೆ ಉದ್ದ ಕೂದಲು ಹಾಗೂ ಗಡ್ಡವನ್ನು ಹಾಗೆಯೇ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
