ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ರಾಜಕುಮಾರ ಹಾಗೂ ಜೇಮ್ಸ್ ಸಿನಿಮಾಗಳ ಮೂಲಕ ಕನ್ನಡಿಗರಿಗೂ ಚಿರಪರಿಚಿತರಾದ ನಟಿ ಪ್ರಿಯಾ ಆನಂದ್. ಬಹುಭಾಷಾ ನಟಿ ಪ್ರಿಯಾ ಆನಂದ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 36 ವರ್ಷದ ಪ್ರಿಯಾ ಮದುವೆಯ ವಿಚಾರವೊಂದು ಇದೀಗ ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ. ಸ್ಟಾರ್ ನಟಿ ಇದೀಗ ನಿತ್ಯಾನಂದ ಜೊತೆ ಮದುವೆಯಾಗೋ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ನಿತ್ಯಾನಂದ ಮೇಲೆ ಅತ್ಯಾಚಾರ ಸೇರಿದಂತೆ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಆದರೂ ನಿತ್ಯಾನಂದನಿಗಿರೋ ಅಭಿಮಾನಿಗಳ ಸಂಖ್ಯೆ ಮಾತ್ರ ಕಮ್ಮಿ ಇಲ್ಲ. ದೇಶ ವಿದೇಶದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ನಿತ್ಯಾನಂದನ ಪ್ರೀತಿಯಲ್ಲಿ ಈ ಹಿಂದೆ ನಟಿಯೊಬ್ಬರು ಬಿದ್ದಿದ್ದರು ಅನ್ನೋ ಸುದ್ದಿ ಕೂಡ ಹರಿದಾಡಿತ್ತು. ಆದರೆ ಇದೀಗ ಪ್ರಿಯಾ ಆನಂದ್ ಓಪನ್ ಆಗಿ ನಿತ್ಯಾನಂದರನ್ನು ಮದುವೆ ಆಗ್ತಿನಿ ಎಂದಿದ್ದಾರೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ ಪ್ರಿಯಾ ಆನಂದ್, ‘ನಾನು ನಿತ್ಯಾನಂದರನ್ನು ಮದುವೆ ಆಗಲು ಬಯಸಿದ್ದೇನೆ. ಅವರ ಬಗ್ಗೆ ಏನೇ ಅರೋಪಗಳು ಇದ್ದರೂ ಅನೇಕ ಜನರು ಅವರನ್ನು ಇಷ್ಟಪಡುತ್ತಾರೆ. ಹಾಗಾದರೆ, ನಿತ್ಯಾನಂದ ಅವರಲ್ಲಿ ಏನೋ ಒಂದು ವಿಶೇಷ ಗುಣ ಇರಲೇಬೇಕಲ್ಲವೇ..? ನಿತ್ಯಾನಂದ ಅವರನ್ನು ನಾನು ಮದುವೆ ಆದರೆ ನನ್ನ ಸರ್ನೇಮ್ ಕೂಡ ಬದಲಾಯಿಸಿಕೊಳ್ಳಬೇಕಿಲ್ಲ. ಏಕೆಂದರೆ, ನಮ್ಮಿಬ್ಬರ ಹೆಸರು ಹೆಚ್ಚೂ ಕಡಿಮೆ ಒಂದೇ ರೀತಿ ಇದೆ..’ ಎಂದು ಹೇಳಿದ್ದಾರೆ.
ಪ್ರಿಯಾ ಆನಂದ್ ಹೇಳಿಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ. ತಮಾಷೆಗಾಗಿ ಪ್ರಿಯಾ ಈ ರೀತಿ ಹೇಳಿರಬಹುದು ಅನ್ನೋ ಮಾತು ಕೂಡ ಕೇಳಿ ಬರ್ತಿದೆ. ಈ ಬಗ್ಗೆ ಪ್ರಿಯಾ ಆನಂದ್ ಸ್ಪಷ್ಟನೆ ನೀಡಬೇಕಿದೆ.