ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅವಳಿ ಮಕ್ಕಳ ಪೋಷಕರಾದ ನಟಿ ನಯನತಾರ, ವಿಘ್ನೇಶ್ ಶಿವನ್
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ವಿಘ್ನೇಶ್ ಶಿವನ್ “ನಯನ್ ಹಾಗೂ ನಾನು ಅಪ್ಪ, ಅಮ್ಮ ಆಗಿದ್ದೀವಿ. ನಮಗೆ ಅವಳಿ ಗಂಡು ಮಕ್ಕಳು ಹುಟ್ಟಿದ್ದಾರೆ. ನಮ್ಮ ಪ್ರಾರ್ಥನೆ ಹಾಗೂ ಹಿರಿಯರ ಆರ್ಶಿರ್ವಾದದಿಂದ ಎಲ್ಲ ಶುಭವಾಗಿದೆ. ಇಬ್ಬರು ಮಕ್ಕಳು ಹುಟ್ಟಿದ್ದಾರೆ ನಿಮ್ಮೆಲ್ಲರ ಆಶಿರ್ವಾದ ಬೇಕು” ಎಂದು ಬರೆದು ಅವಳಿ ಮಕ್ಕಳ ಕಾಲುಗಳಿಗೆ ಮುತ್ತಿಡುತ್ತಿರುವ ಫೋಟೊಗಳನ್ನು ವಿಘ್ನೇಶ್ ಶಿವನ್ ಹಂಚಿಕೊಂಡಿದ್ದಾರೆ.
ಮಾರ್ಚ್ ತಿಂಗಳಲ್ಲೇ ಈ ಜೋಡಿ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ಲ್ಯಾನ್ ಮಾಡಿದೆ ಎಂಬ ತಮಿಳು ಸಿನಿಮಾ ರಂಗದಲ್ಲಿ ಜೋರಾಗಿಯೇ ಕೇಳಿ ಬಂದಿತ್ತು. ಅದೀಗ ನಿಜವಾಗಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ನಟಿ ಪ್ರಿಯಾಂಕ ಚೋಪ್ರಾ ಹಾಗೂ ನಿಕ್ ಜೋನಾಸ್ ದಂಪತಿ ಬಾಡಿಗೆ ತಾಯಿಯ ಮೂಲಕ ಹೆಣ್ಣು ಮಗುವನ್ನು ಪಡೆದಿದ್ದರು.
