ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಿರ್ಮಾಪಕಿಯಾದ ನಟಿ ಮೇಘನಾ ರಾಜ್
ಇದರ ಜೊತೆ ಮೇಘನಾ ರಾಜ್ ಮಹಿಳಾ ಪ್ರಧಾನ ಸಿನಿಮಾವೊಂದರಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಕಳೆದ ವರ್ಷ ಪನ್ನಗಾಭರಣ, ವಿಶಾಲ್ ಮತ್ತು ವಾಸುಕಿ ವೈಭವ್ ಜೊತೆಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದ ಮೇಘನಾ ರಾಜ್ ಒಟ್ಟಿಗೆ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದರು. ಇತ್ತೀಚೆಗೆ ಮತ್ತೊಂದು ಫೋಟೋ ಶೇರ್ ಮಾಡಿ ಚಿತ್ರವನ್ನು ವಿಶಾಲ್ ನಿರ್ದೇಶನ ಮಾಡುತ್ತಿದ್ದು, ಪನ್ನಗಾಭರಣ ನಿರ್ಮಾಪಕರು ಎಂದು ಹೇಳಿದ್ದರು. ಇದೀಗ ಈ ಸಿನಿಮಾಗೆ ಮೇಘನಾ ಕೂಡ ಬಂಡವಾಳ ಹೂಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಚಿತ್ರದಲ್ಲಿ ಮೇಘನಾ ರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಂತ ಕನ್ನಲಿ ನಿರ್ದೇಶನದ ಸಿನಿಮಾದ ಕಂಪ್ಲೀಟ್ ಆದ ಬಳಿಕ ಹೊಸ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ
