ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಾಣಿಯಾಗಿ ಕಂಗೊಳಿಸಿದ ಕಾರುಣ್ಯ ರಾಮ್: ನಟಿಯ ಸೌಂದರ್ಯಕ್ಕೆ ಮರುಳಾದ ಫ್ಯಾನ್ಸ್
ರಾಣಿಯ ಅವತಾರದಲ್ಲಿ ಕಾಣಿಸಿಕೊಂಡಿರುವ ಕಾರುಣ್ಯ ರಾಮ್ ಅದಕ್ಕಾಗಿ ಅಂಥದ್ದೆ ಲೊಕೇಶನ್ ಹುಡುಕಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ನವರಾತ್ರಿಯ ವಿಶೇಷ ಸಂದರ್ಭದಲ್ಲಿ ಕಾರುಣ್ಯ ರಾಮ್ ಈ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಕಾನ್ಸೆಪ್ಟ್ ಹಾಗೂ ಡಿಸೈನ್ ಬಿಂದು ರೆಡ್ಡಿ ಮಾಡಿದ್ದು, ಮಧುರಾ ಫೋಟೋಗ್ರಫಿ ಹಾಗೂ ನಿಖಿತಾ ಆನಂದ್ ಮೇಕಪ್ ಮಾಡಿದ್ದಾರೆ. ಇದೊಂದು ನನ್ನ ಜೀವನದ ಸುಂದರ ಕ್ಷಣ. ಎಲ್ಲ ಫೋಟೋಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ ಎಂದು ಕಾರುಣ್ಯ ರಾಮ್ ಫೋಟೋ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾಗಳ ಜೊತೆ ಕಾರುಣ್ಯ ರಾಮ್ ತಮಿಳು ಚಿತ್ರರಂಗಕ್ಕೂ ಎಂಟ್ರಿಕೊಟ್ಟಿದ್ದಾರೆ. ಇತ್ತೀಚೆಗೆ ಕಾರುಣ್ಯ ರಾಮ್ ನಟನೆಯ ಪೆಟ್ರೋಮ್ಯಾಕ್ಸ್ ಸಿನಿಮಾ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಪವನ್ ಒಡೆಯರ್ ನಿರ್ದೇಶನದ ರೆಮೋ ಸಿನಿಮಾದಲ್ಲಿ ನಟಿಸಿದ್ದುಈ ಸಿನಿಮಾ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
ಇದು ವಿಶೇಷವಾಗಿ ನವರಾತ್ರಿಗೆಂದೇ ಮಾಡಲಾದ ಫೋಟೋ ಶೂಟ್. ಕಾನ್ಸೆಪ್ಟ್ ಹಾಗೂ ಡಿಸೈನ್ ಬಿಂದು ರೆಡ್ಡಿ ಅವರು ಮಾಡಿದ್ದು, ಮಧುರಾ ಅವರ ಫೋಟೋಗ್ರಫಿ ಹಾಗೂ ನಿಖಿತಾ ಆನಂದ್ ಮೇಕಪ್ ಮಾಡಿದ್ದಾರೆ. ಇದೊಂದು ನನ್ನ ಜೀವನದ ಸುಂದರ ಕ್ಷಣ. ಎಲ್ಲ ಫೋಟೋಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ ಎಂದು ಕಾರುಣ್ಯ ರಾಮ್ ಫೋಟೋ ಕುರಿತು ಸಂತಸ ಹಂಚಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಕಾರುಣ್ಯ ರಾಮ್ ನಟನೆಯ ಪೆಟ್ರೊಮ್ಯಾಕ್ಸ್ ಸಿನಿಮಾ ರಿಲೀಸ್ ಆಗಿದೆ. ಕಾರುಣ್ಯ ನಿರ್ವಹಿಸಿದ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೇ, ಪವನ್ ಒಡೆಯರ್ ನಿರ್ದೇಶನದ ರೆಮೋ ಸಿನಿಮಾದಲ್ಲಿ ಕಾರುಣ್ಯ ನಟಿಸಿದ್ದು, ಈ ಸಿನಿಮಾದಲ್ಲಿ ಅವರು ಪ್ರಿಯಾ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದು ಸಿನಿಮಾ ಇನ್ನಷ್ಟೇ ರಿಲೀಸ್ ಆಗಬೇಕಿದೆ.
ನಾನಾ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಕಾರುಣ್ಯ ಕಿರಗೂರಿನ ಗಯ್ಯಾಳಿಗಳು, ಮನೆ ಮಾರಾಟಕ್ಕಿದೆ ಸೇರಿದಂತೆ ಪ್ರಯೋಗಾತ್ಮಕ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಮನೆ ಮಾರಾಟಕ್ಕಿದೆ ಸಿನಿಮಾದ ನಟನೆಗಾಗಿ ಇವರು ಸೈಮಾ ಪ್ರಶಸ್ತಿ ಕೂಡ ದೊರೆತಿದೆ. ಸಿನಿಮಾಗಳಲ್ಲಿ ಮಾತ್ರವಲ್ಲ, ಕಿರುತೆರೆ ಹಲವಾರು ಶೋಗಳಲ್ಲಿ ಕಾರುಣ್ಯ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಕೂಡ ಇವರಾಗಿದ್ದಾರೆ.
